
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಮಲೈಕಾ ಸೊಸೈಟಿ ಹೆಸರಿನಲ್ಲಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿದ್ದಾರೆ. ಅವಧಿ ಮುಗಿದ ನಂತರ ಅದನ್ನು ಹಿಂತಿರುಗಿಸದೆ ವಂಚನೆ ಮಾಡಿದ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಮುಂಬಯಿ ಹಾಗೂ ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಶಾಖೆಗಳನ್ನು ಹೊಂದಿದೆ. ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿಯನ್ನು ಕೊಡುತ್ತೇವೆ ಎಂದು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಸೊಸೈಟಿಗೆ ಬರುವಂತೆ ಮಾಡಿದ್ದಾರೆ.
ಉದ್ಯೋಗದಿಂದ ನಿವೃತ್ತಿಯಾದಗ ದೊರೆತ ಹಣ ವನ್ನು ಅಲ್ಲಿ ಠೇವಣಿ ಇಟ್ಟಿದ್ದರು. ಆದರೆ ಸೊಸೈಟಿಯವರು ಅವಧಿ ಮುಗಿದ ನಂತರ ಅದರ ಮಾಲೀಕರು ತಮ್ಮ ಖಾತೆಗೆ ಜಮೆ ಮಾಡಿಸಿದ್ದಾರೆ. ವಿಷಯ ತಿಳಿದ ನೂರಕ್ಕೂ ಅಧಿಕ ಜನರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು, ಉಡುಪಿ, ಬಂಟ್ವಾಳ, ಪುತ್ತೂರು, ಇನ್ನೂ ಹಲವಾರು ಕಡೆಗಳಲ್ಲಿ ಮಲೈಕಾ ಎಲೆಕ್ಟ್ರಾನಿಕ್ ಮಳಿಗೆಗಳಿವೆ. ಜಿಲ್ಲೆಯಲ್ಲಿ 800 ಕ್ಕೂ ಅಧಿಕ ಗ್ರಾಹಕರನ್ನು ಸೊಸೈಟಿ ಹೊಂದಿದೆ. ಇನ್ನೂ ಎಷ್ಟು ಜನರಿಗೆ ಮೋಸ ಆಗಿರುವುದು ಪತ್ತೆ ಮಾಡಬೇಕಾಗಿದೆ ಪೊಲೀಸರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.