
ನಾಗರ ಹಾವನ್ನು ಸೆರೆ ಹಿಡಿದು ವಾಪಸ್ಸಾಗುತ್ತಿದ್ದಾಗ ಸ್ನೇಕ್ ಅಶೋಕ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ರಸ್ತೆಯಲ್ಲಿರುವ ಗುಂಡಿಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ಆದಿತ್ಯವಾರ ರಾತ್ರಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿಯಲ್ಲಿ ನಡೆದಿದೆ.
ಆಟಿ ಅಮಾವಾಸ್ಯೆಯಂದು ಸಂಜೆ, ಬಂಗಾಡಿಯ ಮನೆಯೊಂದರಲ್ಲಿ ನಾಗರ ಹಾವು ಇರುವ ಬಗ್ಗೆ ಬಂದ ಮಾಹಿತಿಯಂತೆ ಸ್ನೇಕ್ ಅಶೋಕ್ ಲಾಯಿಲ ಅವರು ಸ್ಥಳಕ್ಕೆ ತೆರಳಿ ನಾಗರ ಹಾವನ್ನು ಸೆರೆ ಹಿಡಿದು ವಾಪಸ್ ಬರುತ್ತಿರುವಾಗ ಮಂಜೊಟ್ಟಿ ಸಮೀಪ ಎದುರಿನಿಂದ ಬಂದ ಕಾರೊಂದರ ಪ್ರಕಾಶಮಾನ ಲೈಟ್ ನಿಂದ ರಸ್ತೆಯಲ್ಲಿರುವ ಗುಂಡಿಯನ್ನು ಗಮನಿಸದೆ ದ್ವಿಚಕ್ರ ವಾಹನ ಗುಂಡಿಗೆ ಬಿದ್ದು ಅಪಘಾತ ಸಂಭವಿಸಿದೆ.
ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ನಾಗರ ಹಾವು ತುಂಬಿದ ಡಬ್ಬದ ಮುಚ್ಚಳ ತೆರದ ಕಾರಣ ಹಾವು ಪರಾರಿಯಾಗಿದೆ. ಸಣ್ಣಪುಟ್ಟ ಗಾಯಗೊಂಡ ಅಶೋಕ್ ಅವರು ಅಪಾಯದಿಂದ ಪಾರಾಗಿದ್ದಾರೆ. ಆತಂಕದ ನಂತರ ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ತೆರಳಿ ಆಗಿರುವ ಗಾಯ ಎಂದು ಪರೀಕ್ಷಿಸಿ ನಂತರ ಅಲ್ಲಿಂದ ಮನೆಗೆ ಮರಳಿದ್ದಾರೆ.