ಕರಾವಳಿ
ಬೀಜಾಡಿ ಮೊಬೈಲ್ ಅಂಗಡಿಯ ಬೀಗ ಮುರಿದು ಕಳವು

ಕುಂದಾಪುರ: ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ
ರಾಷ್ಟ್ರೀಯ ಹೆದ್ದಾರಿ ಸರ್ಕಲ್ ಬಳಿ ಇರುವ ಕಾಂಪ್ಲೆಕ್ಸ್
ನಲ್ಲಿರುವ ಮೊಬೈಲ್ ಅಂಗಡಿಯ ಬೀಗ ಮುರಿದು ಮೊಬೈಲ್ ಪೋನ್, ಮೊಬೈಲ್ ಚಾರ್ಜರ್, ಸ್ಕ್ರೀನ ಗಾರ್ಡ್ ಫೋನ್, ಸಿಮ್ ಕಾರ್ಡ್, ಬ್ಲೂಟೂತ್ ಮತ್ತು ರೂ. 15,000 ನಗದು ಕಳವು ಮಾಡಲಾಗಿದೆ.
ಕಳವಾದ ನಗದು ಹಾಗೂ ಸ್ವತ್ತುಗಳ ಒಟ್ಟು ಮೌಲ್ಯ 70,000 ರೂಪಾಯಿ ಆಗಿರುತ್ತದೆ. ಈ ಬಗ್ಗೆ ದಿನೇಶ್ ಕೆ.ಎನ್ ಎಂಬವರು ನೀಡಿದ ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ