
ನವದೆಹಲಿ: ಅಡುಗೆ ಅನಿಲ (ಎಲ್ ಪಿಜಿ ಸಿಲಿಂಡರ್) ಬೆಲೆಯಲ್ಲಿ ಮತ್ತೆ ₹೨೫ ರೂಪಾಯಿ ಎರಿಕೆಯಾಗಿದೆ.
ರಾಜಧಾನಿ ದೆಹಲಿಯಲ್ಲಿ ೧೪.೨ ಕೆಜಿ ಎಲ್ ಪಿಜಿ ಸಿಲೆಂಡರ್ ಬೆಲೆ ಈಗ ೮೫೯ ರೂಪಾಯಿ ೫ ಪೈಸೆಯಾಗಿದೆ. ನಿನ್ನೆಯವರೆಗೆ ೮೩೪ ರೂಪಾಯಿ ೫೦ ಪೈಸೆಯಾಗಿತ್ತು. ಕಳೆದ ಜುಲೈ ೧ರಂದು ಎಲ್ ಪಿಜಿ ಸಿಲೆಂಡರ್ ಬೆಲೆ ೨೫ ರೂಪಾಯಿ ೫೦ ಪೈಸೆ ಹೆಚ್ಚಳವಾಗಿತ್ತು.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ೧೪.೨ ಕೆಜಿ ತೂಕದ ಎಲ್ ಪಿಜಿ ಸಿಲೆಂಡರ್ ಬೆಲೆ ೮೬೨ ರೂಪಾಯಿ ೫೦ ಪೈಸೆಯಾಗಿದೆ. ಮುಂಬೈನಲ್ಲಿಯೂ ಸಹ ೧೪.೨ ಕೆಜಿ ಎಲ್ ಪಿಜಿ ಸಿಲಿಂಡರ್ ದರ ಈಗ ೮೫೯.೫ ರೂ, ನಿನ್ನೆಯವರೆಗೆ ೮೩೪.೫೦ ರೂ ಆಗಿತ್ತು. ಕೋಲ್ಕತ್ತಾದಲ್ಲಿ ಎಲ್ಪಿಜಿ ಸಿಲಿಂಡರ್ ದರ ಪ್ರತಿ ಸಿಲಿಂಡರ್ಗೆ ರೂ ೮೬೧ ರಿಂದ ರೂ ೮೮೬ ಕ್ಕೆ ಏರಿಕೆಯಾಗಿದೆ.
ಚೆನ್ನೈನ ಎಲ್ಪಿಜಿ ಸಿಲಿಂಡರ್ಗಾಗಿ ಇಂದಿನಿಂದ ೮೭೫.೫೦ ರೂಗಳನ್ನು ಪಾವತಿಸಬೇಕಾಗುತ್ತದೆ, ಅದು ನಿನ್ನೆಯವರೆಗೆ ೮೫೦.೫೦ ರೂಪಾಯಿ ಆಗಿತ್ತು. ಉತ್ತರ ಪ್ರದೇಶದ ಲಕ್ನೋದಲ್ಲಿ ಎಲ್ಪಿಜಿ ಸಿಲಿಂಡರ್ಗಾಗಿ ೮೯೭.೫ ರೂ. ಪಾವತಿಸಬೇಕಾಗುತ್ತದೆ.