
ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಐಸಿಎಂಆರ್ ಅನುಮತಿ ನೀಡಿದೆ.
ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಮೊದಲಿಗೆ ಕಾಲೇಜುಗಳನ್ನು ತೆರೆಯುವ ಪ್ಲಾನ್ ಹಾಕಿಕೊಂಡಿದ್ದವು. ಆದರೆ ಇದೀಗ ಐಸಿಎಂಆರ್ ನೀಡಿರುವ ಸಲಹೆಯ, ಕಾಲೇಜು ರೀ ಓಪನ್ ಮಾಡುವುದಕ್ಕಿಂತ, ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ಸೇಫ್ ಎಂಬ ಅಂಶವನ್ನು ಪ್ರಸ್ತಾಪಿಸಿದೆ.
ಐಸಿಎಂಆರ್ ನ ಡಿಜಿ ಬಲರಾಮ್ ಭಾರ್ಗವಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಕೊರೋನ ಎದುರಿಸುವ ಪ್ರತಿರೋಧಕ ಶಕ್ತಿ ಅತ್ಯಧಿಕವಾಗಿದೆ. ಅಷ್ಟೇ ಅಲ್ಲ ಮಕ್ಕಳಿಗೆ ಸೋಂಕು ಉಂಟಾಗುವ ಸೋಂಕು ಬರುವಂತೆ ತಡೆಯುವ ರಿಸೆಪ್ಟರ್ ಪ್ರಮಾಣವು ಅತ್ಯಧಿಕ. ಒಂದು ವೇಳೆ ಮಕ್ಕಳಲ್ಲಿ ಕಂಡುಬಂದರೂ ಅವರ ಸಾವಿನ ಪ್ರಮಾಣ 0.01% ಆಗಿರುತ್ತದೆ.
ಆದರೆ ಪ್ರಾಥಮಿಕ ಶಾಲೆಯ ತೆರೆಯುವಾಗ ಶಿಕ್ಷಕರು ಮತ್ತು ಇತರ ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಪಡೆದಿರಬೇಕು ಎಂದು ಐಸಿಎಂಆರ್ ಎಚ್ಚರಿಸಿದೆ.