
ಕರಂಬಳ್ಳಿ ಫ್ರೆಂಡ್ಸ್ (ರಿ.) ವತಿಯಿಂದ ಇಂದು ದಿನಾಂಕ 15-08-2021 ರಂದು ನಡೆದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಭಾಗವಹಿಸಿ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರು ಕರಂಬಳ್ಳಿ ಫ್ರೆಂಡ್ಸ್ (ರಿ.) ಅಧ್ಯಕ್ಷರಾದ ಗಿರಿಧರ್ ಕರಂಬಳ್ಳಿ, ಉಪಾಧ್ಯಕ್ಷರಾದ ದೀಪಕ್ ಕುಮಾರ್, ಗೌರವಾಸಲಹೆಗಾರ ಸದಾನಂದ ನಾಯಕ್, ಕಮಲಾಕ್ಷ ಶೇಟ್, ಮಂಜುಳಾ ಪ್ರಸಾದ್, ಅಥಿತಿಗಳಾದ ಪ್ರಕಾಶ್ ದೇವಾಡಿಗ,ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಉಪಸ್ಥಿತರಿದ್ದರು.