
ಕೇರಳದ ಮಹಮ್ಮದ್ ದಿಲೀಫ್ ಎಂಬವರು ವಿಶ್ವದಲ್ಲೇ ಅತ್ಯಂತ ದೊಡ್ಡ ಮಾರ್ಕರ್ ಪೆನ್ ನಿರ್ಮಾಣ ಮಾಡುವ ಮೂಲಕ ಗಿನ್ನೆಸ್ ದಾಖಲೆಯ ಪುಟಗಳಲ್ಲಿ ತಮ್ಮ ಹೆಸರನ್ನ ನೋಂದಾಯಿಸಿದ್ದಾರೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಮಹಮ್ಮದ್ ಈ ಪೆನ್ನನ್ನ ಹೇಗೆ ತಯಾರು ಮಾಡಿದ್ದಾರೆ ಎಂಬ ವಿಡಿಯೋವನ್ನ ಪೋಸ್ಟ್ ಮಾಡಿದರೆ. ಮೂರು ನಿಮಿಷಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.
ವಿಡಿಯೋದ ಕೊನೆಯಲ್ಲಿ ದಿಲೀಫ್ ತನ್ನ ಸ್ನೇಹಿತರ ಸಹಾಯದಿಂದ ಬೃಹತ್ ಪೆನ್ನನ್ನು ಹಿಡಿದು ಇಂಡಿಯಾ ಎಂದು ಬರೆದಿದ್ದಾರೆ. ಈ ಪೆನ್ 2.745m x 0.315 m ಅಳತೆ ಹೊಂದಿದೆ. ದಿಲೀಫ್ ಸೆಪ್ಟೆಂಬರ್ ನಲ್ಲೇ ಈ ದಾಖಲೆಯನ್ನ ಮಾಡಿದ್ದಾರೆ. ಆದರೆ ಇದೀಗ ಗಿನ್ನೆಸ್ ವಿಶ್ವ ದಾಖಲೆ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಶೇರ್ ಆದ ಬಳಿಕ ನೆಟ್ಟಿಗರ ಗಮನಕ್ಕೆ ಬಂದಿದೆ.