
ಉಡುಪಿಯ ಪ್ರಸಿದ್ಧ ಸಂಸ್ಥೆಯಾದ ಸಾಂಚಿ ಸೌಹಾರ್ದ ಸಹಕಾರಿ ಕಳೆದ 8 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು ತನ್ನ ಅಂಗಸಂಸ್ಥೆಯಾದ ಸಾಂಚಿ ಆಯುರ್ವೇದಿಕ್ ಮೆಡಿಕಲ್ ಸ್ಟೋರ್ ಮತ್ತು ಕ್ಲಿನಿಕ್ ಅನ್ನು ಉಡುಪಿಯ ಬಡಗುಪೇಟೆ ಹೋಟೆಲ್ ಸಮ್ಮರ್ ಪಾರ್ಕ್ ಹಿಂದಿನ ರಸ್ತೆ ಕಟ್ಟಡದಲ್ಲಿ ನಾಳೆ (31/07/21) ಶುಭಾರಂಭವಾಗಲಿದೆ.
ಮೆಡಿಕಲ್ ಸ್ಟೋರ್ ಮತ್ತು ಕ್ಲಿನಿಕ್ ಉದ್ಘಾಟಕರಾಗಿ ಮಂಜುನಾಥ್ ಎಸ್ ಕೆ ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ, ಸದಾಶಿವ ಶೆಟ್ಟಿ ವೃತ್ತಿಪರ ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ಮತ್ತು ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷರಾದ ಭಾಸ್ಕರ್ ಕಾಮತ್ ಭಾಗವಹಿಸಲಿದ್ದಾರೆ.
ಸಂಸ್ಥೆಯ ಸದಸ್ಯರಾದವರಿಗೆ ಕೆಲವು ಉತ್ಪನ್ನಗಳ ಖರೀದಿಯ ಮೇಲೆ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಸಚಿನ್ ಕರ್ಕಡ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.