
ಭಾರತದ ಹಲವು ರಾಜ್ಯಗಳಲ್ಲಿ ಅಗಸ್ಟ್ ೧೯ ರವರೆಗೆ ಬಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದ್ದು, ಮುಂದಿನ ಮೂರು ದಿನಗಳ ಕಾಲ ಜನರು ಎಚ್ಚರಿಕೆಯಿಂದ ಇರುವಂತೆಯೂ ಹೇಳಿದೆ.
ಅಗಸ್ಟ್ 17 ರವರೆಗೆ ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. 16 ಮತ್ತು 17 ರಂದು ಜಾರ್ಖಂಡ್, ಪೂರ್ವ ಮಧ್ಯಪ್ರದೇಶದಲ್ಲಿಅಗಸ್ಟ್ 17 ರಿಂದ 19ರ ವರೆಗೆ, ಛತ್ತೀಸ್ಗಡದಲ್ಲಿ16 ರಿಂದ 19 ರವರೆಗೆ ಹಾಗೂ ವಿದರ್ಭದಲ್ಲಿ ಆಗಸ್ಟ್ 17 ಮತ್ತು 18 ರಂದು ಮಳೆಯಾಗುವ ಸಾಧ್ಯತೆಯಿದೆ. ಒಡಿಶಾದಲ್ಲಿ ಎರಡು ದಿನಗಳ ಕಾಲ ಮಳೆ ಸುರಿಯಲಿದ್ದು, ಕರ್ನಾಟದ ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆಯನ್ನು ನೀಡಿದೆ.