
ಬ್ರಹ್ಮಾವರ: ವ್ಯಾಪಾರದಲ್ಲಿ ತೀವ್ರ ನಷ್ಟದ ಕಾರಣ ಇದೀಗ ವ್ಯಕ್ತಿಯೊರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬ್ರಹ್ಮಾವರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಅರುಣ್ ಕುಮಾರ್ ಶೆಟ್ಟಿ ಬೆಳಗಾವಿಯ ತಿಲಕ್ ವಾಡಿಯಲ್ಲಿ ಅಂಗಡಿ ವ್ಯವಹಾರವನ್ನು ನಡೆಸುತ್ತಿದ್ದು ಇದೀಗ ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದ ನೆಡುಬೆಟ್ಟುವಿನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಮೃತರ ಕಿಸೆಯಲ್ಲಿ ‘’ವ್ಯವಹಾರದಲ್ಲಿ ವ್ಯಾಪಾರ ಕಡಿಮೆ ಇದ್ದ ಕಾರಣ’’ ಎಂಬುದಾಗಿ ಬರೆದ ಚೀಟಿಯು ದೊರೆತಿರುತ್ತದೆ. ಅರುಣ್ ಕುಮಾರ್ ಶೆಟ್ಟಿ ರವರು ಕಳೆದ 2 ವರ್ಷಗಳಿಂದ ಕೊರೋನಾ ಲಾಕ್‌ಡೌನ್ ನಲ್ಲಿ ವ್ಯವಹಾರದಲ್ಲಿ ನಷ್ಟ ಇರುವುದಾಗಿ ಹೇಳುತ್ತಿದ್ದು, ಅದೇ ಕಾರಣದಿಂದ ಜೀವನದಲ್ಲಿ ಜೀಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.