ಕುಂದಾಪುರ: ರೋಶನಿ ಧಾಮ ಬಡ ಪರಿಶಿಷ್ಟ ಪಂಗಡ ಬುಡಕಟ್ಟು ಪರಿವಾರದ ಸಂಕಷ್ಟಕ್ಕೆ ಸ್ಪಂದಿಸಿದ ಡಿವೈಎಸ್ಪಿ ಶ್ರೀಕಾಂತ್

ಕುಂದಾಪುರ ಜೂ. 16 : ಕೋರೋನಾ ಮಹಾಮಾರಿ 2ನೇ ಅಲೆಗೆ ರೋಶನಿ ಧಾಮ ಪರಿಶಿಷ್ಟ ಪಂಗಡ ಬುಡಕಟ್ಟು ಜನರ ಸಂಕಷ್ಟವನ್ನು ಅರಿತು ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ.ರವರು ಹಿಂದೆ ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ್ ಪ್ರಸ್ತುತ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಸ್ಥಿತಿಗತಿಗಳ ಮನವರಿಕೆ ಮಾಡಿ ಸಹಾಯ ಹಸ್ತ ಕೇಳಿದಾಗ ಡಿವೈಎಸ್ಪಿ ಶ್ರೀಕಾಂತ್ ರವರು ಸ್ಪಂದಿಸಿ ಫುಡ್ ಕಿಟ್ ನೀಡಿ ಮಾನವೀಯತೆಯಿಂದ ಮೆರೆದಿದ್ದಾರೆ.
ಡಿವೈಎಸ್ಪಿ ಶ್ರೀಕಾಂತ್ ರವರು ರೋಶನಿ ಧಾಮದ ಜನತೆಗೆ, ವಿದ್ಯಾರ್ಥಿಗಳಿಗೆ ಸರಕಾರದ ಸೌಲಭ್ಯಗಳ ಬಗ್ಗೆ ಮತ್ತು ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು ಸರ್ಕಾರಿ ಕೆಲಸದಲ್ಲಿ ಅಲ್ಲದೇ ಪೊಲೀಸ್ ಇಲಾಖೆ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನಮನ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೆರ್ಯ ತುಂಬಿದರು.
ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ.ರವರು ಬುಡಕಟ್ಟು ಜನಾಂಗದ ಬಗ್ಗೆ ಎಲ್ಲಾ ಅಧಿಕಾರಿ ವರ್ಗದವರು ಹೀಗೆ ಸ್ಪಂದಿಸಿದ್ದರೆ ಮುಂದಿನ ದಿನದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ ಉನ್ನತ ಹುದ್ದೆಯನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ನಮ್ಮ ಮನವಿಗೆ ಸ್ಪಂದಿಸಿದ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ರವರಿಗೆ ಸ್ವಾಮಿ ಕೊರಗಜ್ಜ ಇನ್ನು ಹೆಚ್ಚಿನ ಸ್ಥಾನಮನ ದಯಾ ಪಾಲಿಸಲಿ, ಇನ್ನು ಹೆಚ್ಚು ಸಮಾಜ ಮುಖಿ ಕೆಲಸ ಮಾಡಲಿ ಎಂದು ಪ್ರಾರ್ಥಿಸಿದ್ದರು.
ಕುಂದಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿರವರು ಡಿವೈಎಸ್ಪಿ ಶ್ರೀಕಾಂತ್ ರವರು ರೋಶನಿ ಧಾಮ ಪರಿಶಿಷ್ಟ ಪಂಗಡ ಬುಡಕಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು ತುಂಬಾ ಸಂತೋಷವಾಗಿದೆ ಎಂದರು. ಮೂಡು ಗೋಪಾಡಿ ಪಂಚಾಯತ್ ಸದಸ್ಯೆ ಸುಶೀಲ್ ರವರು ರೋಶನಿ ಧಾಮದ ಪರಿವಾರದವರಿಗೆ ಯಾವುದೇ ಸಂಘ ಸಂಸ್ಥೆಗಳು, ಸ್ಥಳೀಯ ಜನಪ್ರತಿನಿಧಿಗಳು ಕಾರೋನ್ ಸಂಕಷ್ಟ ಕಾಲದಲ್ಲಿ ನಮ್ಮ ಬುಡಕಟ್ಟು ಜನಕ್ಕೆ ಯಾವುದೇ ಕಿಟ್ ನೀಡಲಿಲ್ಲ, ಆದರೆ ನಮ್ಮ ಸಂಕಷ್ಟವನ್ನು ಅರಿತು ಕುಂದಾಪುರ ಡಿವೈಎಸ್ಪಿ ಅವರು ಫುಡ್ ಕಿಟ್ ನೀಡಿದಕ್ಕೆ ನಾವೆಲ್ಲರೂ ಅಭಾರಿಗಳು ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು, ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ.ರವರು, ಕುಂದಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಮೂಡು ಗೋಪಾಡಿ ಪಂಚಾಯತ್ ಸದಸ್ಯೆ ಸುಶೀಲ್ ಉಪಸ್ಥಿತರಿದ್ದರು.