ಕರಾವಳಿ
ಉಡುಪಿ 31 ಮಂದಿಗೆ ಕೊರೋನಾ ಪಾಸಿಟಿವ್.

ಉಡುಪಿ ಜಿಲ್ಲೆಯಲ್ಲಿ ಬುಧವಾರ ಅಬುದಾಬಿಯಿಂದ ಬಂದ ಒರ್ವರು, ಮಹಾರಾಷ್ಟ್ರದಿಂದ ಬಂದ 7 ಮಂದಿ, , ಮಸ್ಕತ್ ನಿಂದ ಬಂದ 2 ಮಂದಿ, ಹೊರಜಿಲ್ಲೆಯಿಂದ ಬಂದ 9 ಮಂದಿ ಹಾಗೂ ಪ್ರಾಥಮಿಕ ಸಂಪರ್ಕದಿಂದ ಉಡುಪಿಯ 12 ಜನಕ್ಕೆ ಸೇರಿ ಒಟ್ಟು 31 ಮಂದಿಗೆ ಕೊರೊನಾ ಪಾಸಿಟಿವ್ ದೃಡಗೊಂಡಿದೆ.
ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1421 ಕ್ಕೆ ಏರಿಕೆಯಾಗಿದೆ.
ಒಟ್ಟು 31 ಮಂದಿ ಸೋಂಕಿತರಲ್ಲಿ 20 ಮಂದಿ ಉಡುಪಿ, 7 ಮಂದಿ ಕುಂದಾಪುರ ಮತ್ತು 4 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ 229 ಸಕ್ರಿಯ ಪ್ರಕರಣಗಳಿವೆ ಎಂದು ಎಂದು ತಿಳಿದು ಬಂದಿದೆ.