
ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ಮುನ್ನೂರು ದಾಟಿದ ಪಾಸಿಟಿವ್ ಕೇಸ್, ಜಿಲ್ಲೆಯಲ್ಲಿ ಇಂದು 349 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 9390 ಕ್ಕೆ ಏರಿಕೆಯಾಗಿದೆ
ಕಾರ್ಕಳ ತಾಲೂಕಿನ 56 ವರ್ಷದ ಮಹಿಳೆ, ಉಡುಪಿ ತಾಲೂಕಿನ 69 ವರ್ಷದ ವೃದ್ಧೆ ಕೋವಿಡ್ ನಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಈವರೆಗೆ ಕೋವಿಡ್ -19 ಗೆ 80 ಮಂದಿ ಅಸುನೀಗಿದ್ದಾರೆ.
ಇಂದು ಆಸ್ಪತ್ರೆ ಯಿಂದ 360 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 6492 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 2818 ಸಕ್ರಿಯ ಪ್ರಕರಣಗಳಿವೆ.