
ಕಾಪು: ಮೂಳೂರು ಗ್ರಾಮದ ಭಾರತ್ ಪೆಟ್ರೋಲ್ ಬಂಕ್ ಮ್ಯಾನೇಜರ್ ಒಬ್ಬ ಮಾಲಿಕನಿಗೆ 18 ಲಕ್ಷ ರೂಪಾಯಿ ವಂಚಿಸಿದ ಘಟನೆ ವರದಿಯಾಗಿದೆ.
ದೀಪಕ್ ಶೆಟ್ಟಿ ಎಂಬುವವರ ಮಾಲಕತ್ವದ ಪೆಟ್ರೋಲ್ ಬಂಕ್ ನಲ್ಲಿ ಸುಖೇಶ್ ಶೆಟ್ಟಿ ಎಂಬ ವ್ಯಕ್ತಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಪೆಟ್ರೋಲಿಯಮ್ ಕಂಪೆನಿಗೆ ಠೇವಣೆ ಮಾಡುತ್ತಿದ್ದ ಹಣದಲ್ಲಿ ವಂಚಿಸಿರುವ ಕುರಿತು ಆರೋಪ ಮಾಡಲಾಗಿದೆ.
ಸುಮಾರು 4 ತಿಂಗಳಿಂದ ಸುಖೇಶ್ ಶೆಟ್ಟಿ ಎಂಬವನು ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಪೆಟ್ರೋಲ್ ಬಂಕ್‌ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರವನ್ನು ಸುಖೇಶ್ ಶೆಟ್ಟಿ ನೋಡಿಕೊಂಡಿದ್ದನು. ಕೆ. ದೀಪಕ್‌ರಾಜ್ ಶೆಟ್ಟಿ ರವರ ಪೆಟ್ರೋಲ್ ಬಂಕ್‌ನ ಹಣವನ್ನು ಕಾರ್ಡ್ ಮೂಲಕ ಮತ್ತು ನಗದು ರೀತಿಯಲ್ಲಿ ಬ್ಯಾಂಕಿಗೆ ಸುಖೇಶ್ ಶೆಟ್ಟಿಯು ಜಮಾ ಮಾಡಿಕೊಂಡು ಬರುತ್ತಿದ್ದ, ಜಮಾ ಮಾಡಿದ ಹಣದಲ್ಲಿ ವ್ಯತ್ಯಾಸ ಬಂದಿರುವುದಾಗಿ ಕಂಪನಿಯವರು ಕೆ. ದೀಪಕ್‌ರಾಜ್ ಶೆಟ್ಟಿ ರವರಿಗೆ ತಿಳಿಸಿದ್ದು, ಈ ಬಗ್ಗೆ ಆರೋಪಿಯಲ್ಲಿ ವಿಚಾರಿಸಿದಾಗ ಚೆಕ್ ಮಾಡಿ ನಿಮಗೆ ತಿಳಿಸುತ್ತೇನೆ ಎಂದು ಹೇಳಿ ನಂತರ ತನ್ನ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿ ಮೇ 27 ರಂದು ಸಂಜೆ 4:೦೦ ಗಂಟೆ ಸಮಯಕ್ಕೆ ಪೆಟ್ರೋಲ್ ಬಂಕ್‌ನಿಂದ ತೆರಳಿರುವುದಾಗಿ ಕೆ. ದೀಪಕ್‌ರಾಜ್ ಶೆಟ್ಟಿ ರವರ ಬಂಕ್‌ನ ಇತರೆ ಕೆಲಸದವರು ತಿಳಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಮೇ 28 ರಂದು ಕೆ. ದೀಪಕ್‌ರಾಜ್ ಶೆಟ್ಟಿ ರವರು ಪೆಟ್ರೋಲ್ ಬಂಕ್‌ಗೆ ಬಂದು ನೋಡುವಾಗ ಬ್ಯಾಂಕಿನ ಸ್ಟೇಟ್‌ಮೆಂಟ್, ಸೆಲ್ಸ್‌ರಿಪೋರ್ಟ್, ಮತ್ತು ಕಾರ್ಡಿನ ಸ್ಟೇಟ್‌ಮೆಂಟ್‌ಗೆ ಹಾಗೂ ಸೆಲ್ಸ್ ರಿಪೋರ್ಟ್‌ಗೂ ಸುಮಾರು 18,00,000/- ರೂಪಾಯಿಗಳು ವ್ಯತ್ಯಾಸ ಕಂಡು ಬಂದಿದೆ.ಸುಖೇಶ್ ಶೆಟ್ಟಿಯು ಪೆಟ್ರೋಲ್ ಬಂಕ್‌ನ ಹಣವನ್ನು ಬ್ಯಾಂಕಿಗೆ ಸರಿಯಾಗಿ ಜಮಾ ಮಾಡದೇ ಮೋಸ ಮಾಡಿ ಪೆಟ್ರೋಲ್ ಬಂಕ್‌ನ ವ್ಯವಹಾರದಲ್ಲಿ ಸುಮಾರು 18 ಲಕ್ಷ ರೂಪಾಯಿಗಳು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚನೆ ಮಾಡಿದ್ದಾನೆ.
ಈ ಸಂಬಂಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.