ಕರಾವಳಿ
ಉಪ್ಪಿನಕುದ್ರು: ವಿದ್ಯುತ್ ಕೇಬಲ್ ತಗುಲಿ ಬಾಲಕನ ಸಾವು

ಕುಂದಾಪುರ ಅ. 19: ನವರಾತ್ರಿ ಉತ್ಸವಕ್ಕಾಗಿ ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಗುಲಿ 16 ವರ್ಷದ ಬಾಲಕ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಎಂಬಲ್ಲಿ ನಡೆದಿದೆ.
ಉಪ್ಪಿನಕುದ್ರು ನಿವಾಸಿ ಗಂಗಾಧರ ಆಚಾರ್ ಅವರ ಪುತ್ರ ಧನುಷ್ (16) ಮೃತ ದುರ್ದೈವಿ ಬಾಲಕ ಧನುಷ್, ತನ್ನ ಮನೆ ಪಕ್ಕದ ಶ್ರೀ ಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮನೆಯಿಂದ ಹೋಗಿದ್ದು, ರಾತ್ರಿ 9.30 ಗಂಟೆಗೆ ದೇವಸ್ಥಾನದಲ್ಲಿ ಕಾರ್ಯಕ್ರಮದ ನಿಮಿತ್ತ ವಿದ್ಯುದ್ದೀಪದ ಅಲಂಕಾರ ಮಾಡಿದ ದೇವಸ್ಥಾನದ ದಕ್ಷಿಣ ದಿಕ್ಕಿನ ಕಂಪೌಂಡ್ ಗೋಡೆಗೆ ಅಳವಡಿಸಿದ ವಿದ್ಯುದ್ದೀಪದ ಕೇಬಲ್ ಆಕಸ್ಮಿಕವಾಗಿ ತಗಲಿ ಅಸ್ವಸ್ಥಗೊಂಡಿದ್ದು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆತ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾ