ಕರಾವಳಿ
ಮಣಿಪಾಲ: ಮನೆ ಖಾಲಿ ಮಾಡುವಂತೆ ಮಾಲೀಕನಿಂದ ಹಲ್ಲೆ..!

ಮಣಿಪಾಲ : ಬಾಡಿಗೆ ಮನೆಯಲ್ಲಿದ್ದ ಕುಟುಂಬಕ್ಕೆ ಖಾಲಿ ಮಾಡುವಂತೆ ಮಾಲೀಕನು ಹಲ್ಲೆ ಮಾಡಿರುವುದಾಗಿ ಅರುಣ ಕುಮಾರ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅರುಣ ಕುಮಾರ್ ಅವರು ಉದಯ್ ಕುಮಾರ್ ಶೆಟ್ಟಿಯವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದು, ಮೇ.3 ರಂದು ಮನೆಯ ಮಾಲೀಕ ಉದಯ ಕುಮಾರ್ ಶೆಟ್ಟಿ ರವರು ಕರೆ ಮಾಡಿ ಮನೆ ಖಾಲಿ ಮಾಡಿ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಮಾತ್ರವಲ್ಲ ಸಂಜೆ ವೇಳೆ ಉದಯ ಕುಮಾರ್ ಶೆಟ್ಟಿ ಹಾಗೂ ಅವರ ಮಾವ ಸುಂದರ್ ರವರು ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆ ಖಾಲಿ ಮಾಡುವಂತೆ ಹೇಳಿ ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ
ದೂರಿನಲ್ಲಿ ತಿಳಿಸಲಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.