ಉಪ್ಪುಂದ ಜೆಸಿಐ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ಪೊಲೀಸ್ ನಾಗೇಶ್ ಗೌಡ ಇವರಿಗೆ ಸನ್ಮಾನ

ಜೆಸಿಐ ಉಪ್ಪುಂದ ಆಯೋಜಿಸಿರುವ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಪ್ರತಿ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಬೈಂದೂರು ಆರಕ್ಷಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗೇಶ್ ಗೌಡ ಇವರನ್ನು ಪ್ರವಾಸಿ ಮಂದಿರ ಬೈಂದೂರಿನಲ್ಲಿ ಗೌರವಿಸಲಾಯಿತು. ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮದಾಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ,ಜೇಸಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.ಜೇಸಿ ರಾಮಕೃಷ್ಣ ಖಾರ್ವಿ ಜೇಸಿವಾಣಿ ವಾಚಿಸಿದರು.ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಸಂದೀಪ್ ನಾಯಕ್ ಧನ್ಯವಾದಗೈದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಅವಿನಾಶ್ ಪೂಜಾರಿ ಪೂರ್ವಾಧ್ಯಕ್ಷರಾದ ಶ್ರೀ ಯು.ಪ್ರಕಾಶ್ ಭಟ್, ಮಂಗೇಶ್ ಶ್ಯಾನ್ ಭಾಗ್,ಸುಬ್ರಹ್ಮಣ್ಯ ಜಿ.ಪುರಂದರ್ ಖಾರ್ವಿ,ಜೇಸಿ ಮಂಜುನಾಥ್ ದೇವಾಡಿಗ,ಜೇಸಿ ಗಣೇಶ್ ಗಾಣಿಗ,ಜೇಸಿ ನಾಗರಾಜ್ ಉಬ್ಜೇರಿ,ಜೇಸಿ ಗೌರೀಶ್ ಹುದಾರ್,ಜೇಸಿ ವಿಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು