
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಪ್ರಕರಣ ಜಾಸ್ತಿಯಾಗುತ್ತಿದ್ದು ಇಂದು ಉಡುಪಿ 22, ದಕ್ಷಿಣ ಕನ್ನಡ 168 ಕರೋನಾ ಸೋಂಕು ದೃಢವಾಗಿದೆ.
ಉಡುಪಿ 22 ಪ್ರಕರಣದೊಂದಿಗೆ ಸೋಂಕಿತರ ಸಂಖ್ಯೆ 1443ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 223 ಇವತ್ತು 28 ಜನ ಗುಣಮುಖರಾಗಿ ಬಿಡುಗಡೆಯಾಗಿರುವುದಾಗಿ ಉಡುಪಿ ಡಿಎಚ್ಒ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡದಲ್ಲಿ ಇಂದು 167 ಕರೋನಾ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇದರೊಂದಿಗೆ 1701ಕ್ಕೆ ಏರಿಕೆಯಾಗುವ ಎಲ್ಲಾ ಸಾಧ್ಯತೆಯಿದೆ.