
ನೂತನ ಸಚಿವ ಸಂಪುಟದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಚಿವರಾಗಿ ಸ್ಥಾನ ನೀಡಲೇಬೇಕು
ಶ್ರೀನಿವಾಸ ಪೂಜಾರಿಯವರು ಈವರೆಗೆ ಸಚಿವರಾಗಿ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ಧಾರ್ಮಿಕ ದತ್ತಿ ಇಲಾಖೆಯ ಮುಖೇನ ಅಭೂತಪೂರ್ವ ಪ್ರಗತಿಗೆ ಕಾರಣೀಕರ್ತರಾಗಿದ್ದು ,ಯಾವುದೇ ಕಳಂಕ ಇಲ್ಲದೆ ಮಾದರಿ ಜನಪ್ರತಿನಿಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.ಸಚಿವರಾಗಲು ಬಿಲ್ಲವ ಸಮುದಾಯ ಹಾಗೂ ಇಡೀ ರಾಜ್ಯದ ಜನಸಾಮಾನ್ಯರ ಪ್ರಥಮ ಪ್ರಾಶಸ್ತ್ಯದ ಆಯ್ಕೆ ಶ್ರೀನಿವಾಸ ಪೂಜಾರಿಯಾವರಾಗಿದ್ದಾರೆ.
ಯಾವುದೇ ಷಡ್ಯಂತರ ಅಥವಾ ಲಾಭಿ ನಡೆದರೂ ಕೋಟಾ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲೇಬೇಕೆಂದು ಒತ್ತಾಯಿಸುತ್ತೇವೆ.ಹಾಗೂ
ಶ್ರೀನಿವಾಸ ಪೂಜಾರಿಯವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಲ್ಲಿ ಬೃಹತ್ ಜನಾಂದಲೋನ ರೂಪಿಸಲು ರಾಜ್ಯಾದ್ಯಂತ ಎಲ್ಲಾ ಬಿಲ್ಲವ ಸಮುದಾಯದ ಸಂಘ ಸಂಸ್ಥೆಗಳು ಮತ್ತು ಸರ್ವರ ಸಹಕಾರವನ್ನು ಬಯಸುತ್ತೇವೆ.
ಇಂತಹ ಯಾವುದೇ ಘಟನೆಗೆ ಮುಂದಾಗದಿರಲು ಕೋಟಾ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಲೇಬೇಕೆಂಬುದು ಪ್ರಸ್ತುತ ರಾಜ್ಯ ಸರ್ಕಾರಕ್ಕೆ ನಮ್ಮ ಆಗ್ರಹವಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ
ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.