
ಮಂಗಳೂರು, ಜೂ 22 : ನಾಳೆಯಿಂದ ದ ಕ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರ ವರೆಗೆ(50% ಪ್ರಯಾಣಿಕರು) ಬಸ್ ಸಂಚಾರವಿರಲಿದೆ. ನಿಂತು ಪ್ರಯಾಣಿಸಲು ಅವಕಾಶವಿಲ್ಲ. ಖಾಸಗಿ ಬಸ್ ಗಳಿಗೂ ಅವಕಾಶ ನೀಡಲಾಗಿದೆ.
ಇದೀಗ ಜಿಲ್ಲಾಡಳಿತವು ಹೊರಡಿಸಿದ ಹೊಸ ಮಾರ್ಗ ಸೂಚಿಯಲ್ಲಿ ಬಸ್ ಸಂಚಾರದ ಕುರಿತು ಮಾಹಿತಿ ನೀಡಲಾಗಿದೆ. ಮಕ್ಕಳು ಹೊರ ಬರುವಂತಿಲ್ಲ. ಅಂಗಡಿ ಅಥವಾ ಇನ್ನೆಲ್ಲಿಗೂ 18 ವರ್ಷದೊಳಗಿನ ಯಾರಿಗೂ ಅವಕಾಶವಿಲ್ಲ. ಬೆಳಗ್ಗೆ 5 ರಿಂದ 10 ಗಂಟೆಯ ವರಗೆ ವಾಕಿಂಗ್ ಗೆ ಅವಕಾಶ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ವಾರದ 5 ದಿನ ಬಸ್ ಸಂಚಾರವಿರಲಿದೆ. ಮದುವೆಗೆ 25 ಜನರಿಗೆ ಅವಕಾಶ ನೀಡಲಾಗಿದೆ. ಮನೆಗಳಲ್ಲಿ ಮದುವೆ ನಡೆಸಬಹುದಾಗಿದೆ. ಯಾವುದೇ ಧಾರ್ಮಿಕ ಕೇಂದ್ರ ತೆರೆಯಲು ಅವಕಾಶವಿಲ್ಲ. ನಾಳೆಯಿಂದ ಎಲ್ಲಾ ಅಂಗಡಿಗಳು ತೆರೆಯಬಹುದಾಗಿದೆ.
ಜಿಲ್ಲೆಯಲ್ಲಿ ಮಾಲ್ ಗಳು ತೆರೆಯಲು ಅವಕಾಶ ಇಲ್ಲ. ಹವಾನಿಯಂತ್ರಿತ ಕಾಂಪ್ಲೆಕ್ಸ್ ಗಳಿಗೂ ಅವಕಾಶವಿಲ್ಲ. ಹೋಟೇಲ್ ಗಳಲ್ಲಿ 50% ಜನರಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನದ ಬಳಿಕ ಹೋಟೆಲ್ ಗಳಲ್ಲಿ ಪಾರ್ಸೆಲ್ ಮಾತ್ರ ಲಭ್ಯವಿರಲಿದೆ. ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 7ರ ವರೆಗೆ ವೀಕೇಂಡ್ ಕರ್ಫ್ಯೂ ವಿರಲಿದೆ. ವೀಕೆಂಡ್ ಕರ್ಫ್ಯೂ ಸಂದರ್ಭ ಹಾಲಿನ ಬೂತ್ ಗಳಿಗೆ ಮಾತ್ರ ಅವಕಾಶ ಇದೆ. ಉಳಿದಂತೆ ಯಾವುದಕ್ಕೂ ಅವಕಾಶವಿಲ್ಲ. 24/7 ಗಂಟೆ ಕಾರ್ಯಾಚರಿಸುವ ಕಂಪೆನಿಗಳಿಗೆ ಅವಕಾಶವಿದೆ. ಆದರೆ ಕಂಪೆನಿಗಳ ಐಡಿ ತೋರಿಸಿ ಸಂಚಾರ ನಡೆಸಬಹುದಾಗಿದೆ.