
ಬೆಂಗಳೂರು: ಮುತ್ತೂಟ್ ಫೈನಾನ್ಸ್ಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರೆಸುತ್ತಿದ್ದಾರೆ.
ಇದೇ ೨೧ ರಂದು ಸುಬ್ಬಯ್ಯನ ಪಾಳ್ಯದ ಮುತ್ತೂಟ್ ಫೈನಾನ್ಸ್ ಶಾಖೆಗೆ ಕಳ್ಳರು ನುಗ್ಗಿದ್ದರು. ಈ ವೇಳೆ ಶಾಖೆಯಲ್ಲಿರೋ ಚಿನ್ನಾಭರಣ ಕದಿಯೋಕೆ ಮುಂದಾಗಿದ್ರು. ಆದ್ರೆ ಕೂಡಲೇ ಅಲ್ಲಿದ್ದ ಸಿಬ್ಬಂದಿ ಬಾಣಸವಾಡಿ ಪೊಲೀಸರಿಗೆ ಈ ಬಗ್ಗೆ ದೂರು ಕೊಟ್ಟಿದ್ದಾರೆ.
ತಕ್ಷಣ ಅಲರ್ಟ್ ಆದ ಪೊಲೀಸರು ಕಳ್ಳತನದ ವೇಳೆಯೇ ದಾಳಿ ನಡೆಸಿ, ಕಳ್ಳರನ್ನು ಹಿಡಿದಿದ್ದಾರೆ. ಅಲ್ಲದೇ ದಾಳಿಯಲ್ಲಿ ಕಳ್ಳತನವಾಗ್ತಿದ್ದ ೪ ಕೋಟಿ ಮೌಲ್ಯದ ಚಿನ್ನಾಭರಣಗಳ ರಕ್ಷಣೆ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಮೂಲತಃ ನೇಪಾಳ ಮೂಲದವರಾಗಿರೋ ಆರೋಪಿಗಳು ಸೆಕ್ಯೂರಿಟಿ ಗಾರ್ಡ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಜೀವನ ನಡೆಸೋಕೆ ಕಷ್ಟವಾಗ್ತಿದೆ ಅಂತಾ ಕಳ್ಳತನಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನ ಬಂಧಿಸಿ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.