
ಅಮೃತಸರ : ಪಂಜಾಬ್‌ನ ತಾರ್ನ್ ತರಣ್‌ನ ಗುರುದ್ವಾರದಲ್ಲಿ ‘ಪ್ರಸಾದ’ ಸೇವಿಸಿದ ನಂತರ ಕನಿಷ್ಠ 10 ಜನ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥರನ್ನು ಅಮೃತಸರ ಮೂಲದ ಆಸ್ಪತ್ರೆಗೆ ಸ್ಥಳಾಂತರಿಸ ಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತದೆ.
ಇತ್ತೀಚೆಗೆ ನಿಧನರಾದ ತಾಯಿಗಾಗಿ ರಘುವೀರ್ ಸಿಂಗ್ ಎನ್ನುವವರು ಆಯೋಜಿಸಿದ್ದ ‘ಸುಖಮಣಿ ಸಾಹಿಬ್’ ಪ್ರವಚನದಲ್ಲಿ ಶನಿವಾರ ಈ ಘಟನೆ ನಡೆದಿದೆ. ಅವರ ಮನೆಯಲ್ಲಿ ಪ್ರಾರ್ಥನಾ ಪ್ರವಚನವನ್ನು ಆಯೋಜಿಸ ಲಾಗಿತ್ತು. ಪ್ರಾರ್ಥನೆಯ ಪ್ರವಚನದ ನಂತರ ರಘುವೀರ್ ಸಿಂಗ್ ಅವರ ಕುಟುಂಬ ಸದಸ್ಯರು ‘ಪ್ರಸಾದ’ ವಿತರಿಸಿದರು.
ಉಳಿದಿರುವ ‘ಪ್ರಸಾದ್’ ವನ್ನು ಗುರುದ್ವಾರಕ್ಕೆ ಕೊಂಡೊಯ್ಯ ಲಾಯಿತು, ಅಲ್ಲಿ ಗ್ರಂಥಿ ತನ್ನ ಮಕ್ಕಳು ಮತ್ತು ಇತರ ಭಕ್ತರಿಗೆ ಪ್ರಸಾದ ವಿತರಿಸಿದರು. ಪ್ರಸಾದವನ್ನು 10-12 ಜನರಲ್ಲಿ ವಿತರಿಸಲಾಯಿತು; ಅವರಲ್ಲಿ 10 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.