
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಜಿಲ್ಲೆಯ 19 ಜನರಿಗೆ ಕೊರೊನಾ ಸೋಂಕು ದೃಡಪಟ್ಟಿದೆ . ಕರೋನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುದು ಭಾರಿ ಆತಂಕಕಾರಿಯಾಗಿದೆ.
ಇವತ್ತು ಪ್ರಸಿದ್ಧ ಹೋಟೆಲ್ ಸಿಲ್ ಡೌನ್ ಆಗಿರುವುದರಿಂದ ನೂರಾರು ಗ್ರಾಹಕರು ಆತಂಕಕ್ಕೀಡಾಗಿದ್ದಾರೆ .
ನಗರಸಭೆಯ ಸದಸ್ಯರೋರ್ವರಿಗೆ ಹಾಗೂ ಮಾಜಿ ನಗರಸಭೆಯ ಸದಸ್ಯರ ಪುತ್ರನಿಗೆ ಕೊರೊನಾ ಸೋಂಕು ಪಾಸಿಟಿವ್ ದೃಢವಾಗಿದೆ.
ಮುಂದಿನ ದಿನಗಳಲ್ಲಿ ಹೊರ ರಾಜ್ಯ ಮತ್ತು ಬೆಂಗಳೂರಿನಿಂದ ಸಾವಿರಾರು ಜನ ಬರುವ ನಿರೀಕ್ಷೆ ಇದೆ. ಜನರು ಇನ್ನಾದರೂ ಎಚ್ಚೆತ್ತುಕೊಂಡು ಸಾಮಾಜಿಕ ಅಂತರ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಕರೋನ ಹತೋಟಿಗೆ ಬರುವ ಸಾಧ್ಯತೆಯಿದೆ.