ಕರಾವಳಿ
ಕಾರ್ಕಳ: ಕ್ರಿಕೆಟ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಸಾವು..!

ಕಾರ್ಕಳ: ನಂದಳಿಕೆ ಗ್ರಾಮದ ಮಾವಿನಕಟ್ಟೆ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭ ಅವಿವಾಹಿತ ಯುವಕನೋರ್ವ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆ. ೪ ರಂದು ಸಂಭವಿಸಿದೆ.
ಆಲೆಕಟ್ಟೆಯ ನಿವಾಸಿ, ಬೆಂಗಳೂರಿನ ಸಿಮನ್ಸ್ ಇಂಡಿಯಾ ಕಂಪೆನಿ ಉದ್ಯೋಗಿ ಸುಕೇಶ್ ಶೆಟ್ಟಿ (೨೭) ಎಂಬವರು ಮೃತಪಟ್ಟ ದುರ್ದೈವಿ. ಬೌಲಿಂಗ್ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದ ಸುಕೇಶ್ ಅವರು ಹೃದಯಘಾತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ತಂದೆ, ತಾಯಿ, ಮೂವರು ಸಹೋದರರನ್ನು ಅಗಲಿದ್ದಾರೆ.