
ದೇಶದ ಪ್ರಧಾನ ಮಂತ್ರಿಗಳಾದ
ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ *ಮಹಾಲಸಿಕೆ ಅಭಿಯಾನ* ದಿನಾಂಕ 21-6-2021ರಿಂದ ಪ್ರಾರಂಭವಾಗಲಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಉಪ ಆರೋಗ್ಯ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಲಸಿಕೆ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು.
ಈ ಅಭಿಯಾನ ನಿರಂತರವಾಗಿರುತ್ತಿದ್ದು, ದೇಶದ ಎಲ್ಲ ನಾಗರೀಕರಿಗೂ ಉಚಿತ ಲಸಿಕೆ ನೀಡುವ ಗುರಿಯನ್ನು ಹೊಂದಿದೆ. ಸಂಭಾವ್ಯ ಕೋವಿಡ್ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಲಸಿಕೆಗಳು ಪರಿಣಾಮಕಾರಿಯಾಗಿ ಯಶಸ್ವಿಯಾಗಿದ್ದು, ಉಚಿತವಾಗಿ ನೀಡಲಾಗುತ್ತಿರುವ ಈ ಲಸಿಕಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ, ಸಾಂಕ್ರಾಮಿಕ ರೋಗದ ವಿರುದ್ಧದ ಈ ಹೋರಾಟದಲ್ಲಿ ಕೈಜೋಡಿಸಲು ಉಡುಪಿ ನ್ಯೂಸ್ ವತಿಯಿಂದ ಮನವಿ ಮಾಡಿಕೊಳ್ಳುತ್ತೇನೆ.
ಅದೇ ದಿನ ವಿಶ್ವ ಯೋಗ ದಿನಾಚರಣೆಯಿದ್ದು, ನಾವೆಲ್ಲರೂ ಯೋಗದಿನವನ್ನು ಆಚರಿಸುವ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗುವ ಯೋಗಾಭ್ಯಾಸವನ್ನು ಪ್ರತಿ ದಿನವೂ ಕೈಗೊಳ್ಳುವ ಸಂಕಲ್ಪತೊಡೋಣ.