
ಉಡುಪಿ: ಹೆಬ್ರಿಯಿಂದ ಪರ್ಕಳ ರಾಜ್ಯ ಹೆದ್ದಾರಿ ಹಾಗೂ ಮಲ್ಪೆ ಕರಾವಳಿ ಜಂಕ್ಷನ್ ರಾಜ್ಯ ಹೆದ್ದಾರಿ 169 ರಸ್ತೆಯ ಅಗಲೀಕರಣಕ್ಕೆ ಹಸಿರು ನಿಶಾನೆ ನೀಡಿದೆ.
ಉಡುಪಿ- ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆಯವರ ಮುತುವರ್ಜಿಯಿಂದ ಸುಮಾರು 29 ಕಿಲೋಮೀಟರ್ ರಸ್ತೆ ಅಗಲೀಕರಣಕ್ಕೆ 350 ಕೋಟಿ ರೂ. ಅನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯರಿಗೆ ಸಂಸದೆ ಶೋಭಾ ಕರಂದ್ಲಾಜೆಯವರು ಅಭಿನಂದನೆ ತಿಳಿಸಿದ್ದಾರೆ.