
ಬಂಡೀಪುರ : ಕರ್ನಾಟಕ-ಕೇರಳ ಗಡಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಇದರಿಂದಾಗಿ ಕೇರಳದ ಮಾತಂಗ ಚೆಕ್ ಪೋಸ್ಟ್ ಜಲಾವೃತ ಗೊಂಡಿದೆ. ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲಾ ಮುಳುಗಡೆಯಾಗಿರುವ ಕಾರಣ, ಕರ್ನಾಟಕ – ಕೇರಳ ವಾಹನ ಸಂಚಾರ ಬಂದ್ ಆಗಿದೆ.
ರಾಜ್ಯದಲ್ಲಿ ಮುಂಗಾರು ಮಳೆಗೆ ಭಾರೀ ಅವಾಂತರವೇ ಸೃಷ್ಠಿಯಾಗಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅರ್ಧ ಕರ್ನಾಟಕ ನೆರೆ ಸಂಕಷ್ಟಕ್ಕೆ ಸಿಲುಕಿದೆ. ಇದರ ಮಧ್ಯೆ ಕರ್ನಾಟಕ – ಕೇರಳ ಗಡಿ ಭಾಗದಲ್ಲೂ ಭಾರೀ ಮಳೆ ಸುರಿಯುತ್ತಿರುವುದರಿಂದಾಗಿ ಅನೇಕ ಕಡೆಯಲ್ಲಿ ರಸ್ತೆಗಳು ಮುಳುಗಡೆಗೊಂಡಿವೆ. ಹೀಗಾಗಿ ವಾಹನ ಸಂಚಾರ ಅಸ್ತವ್ಯವಸ್ಥಗೊಂಡಿದೆ.
ಭಾರೀ ಮಳೆಯಿಂದಾಗಿ ಕೇರಳದ ಮಾತಂಗ ಚೆಕ್ ಪೋಸ್ಟ್ ಜಲಾವೃತಗೊಂಡಿದೆ. ಇದರಿಂದ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಬಂದ್ ಆಗಿದೆ. ಅಲ್ಲದೇ ಮಳೆಯಿಂದಾಗಿ ಕರ್ನಾಟಕ-ಕೇರಳ ವಾಹನ ಸಂಚಾರ ಸ್ಥಗಿತಗೊಂಡಿದೆ.