
ನವದೆಹಲಿ: ಭಯೋತ್ಪಾದಕರು ಅಡಗಿದ್ದ ಮನೆಯನ್ನು ಮ್ಯಾನ್ ಪೋರ್ಟಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿ ಸಹಾಯದಿಂದ ಭಾರತೀಯ ಸೇನಾಧಿಕಾರಿಗಳು ಹೊತ್ತಿ ಉರಿಯುವಂತೆ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಮನೆಯಲ್ಲಿ ಎಷ್ಟು ಮಂದಿ ಭಯೋತ್ಪಾದಕರು ಅಡಗಿ ಕುಳಿತಿದ್ದರು ಹಾಗೂ ಈ ಘಟನೆಯು ಯಾವ ಸ್ಥಳದಲ್ಲಿ ನಡೆದಿದೆ ಎನ್ನುವ ಮಾಹಿತಿ ತಿಳಿದುಬಂದಿಲ್ಲ.
ಶ್ರೀಶ ತ್ರಿಪಾಠಿ ಎಂಬುವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಭಯೋತ್ಪಾದಕರ ಹುಟ್ಟಡಗಿಸುವ ಇಂತಹ ವಿಡಿಯೋಗಳನ್ನ ಯಾರಿಂದಾದರೂ ನೀಡಲು ಸಾಧ್ಯವಿದೆಯೇ..? ಇದೇ ನವ ಭಾರತ..! ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯ ಅಡಿಯಲ್ಲಿ ಯಾವ ಮನೆಯಲ್ಲಿ ಭಯೋತ್ಪಾದಕರು ಅಡಗಿದ್ದರೋ ಅದೇ ಮನೆಯನ್ನು ಮ್ಯಾನ್ ಪೋರ್ಟಬಲ್ ಆ್ಯಂಟಿ ಟ್ಯಾಂಕ್ ಗೈಡೆಟ್ ಮಿಸೈಲ್ ಬಳಸಿ ನಾಶ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.