
ಮಣಿಪಾಲ: ಶುಕ್ರವಾರ ಬೆಳಿಗ್ಗೆ ನಡೆದ ಸರಣಿ ಅಪಘಾತದಲ್ಲಿ ಮಣಿಪಾಲದ ಉದ್ಯಮಿಯೊರ್ವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಮೃತ ಉದ್ಯಮಿ ಕೆಎಂಸಿ ವಸತಿಗೃಹ ನಿವಾಸಿ ವಾಮನ ನಾಯ್ಕ್ (58). ಅವರು ತನ್ನ ಸ್ಕೂಟರ್‌ನಲ್ಲಿ ಮೇ 28 ರಂದು ಕೆಳಪರ್ಕಳ ಕಡೆ ಹೋಗುತ್ತಿರುವಾಗ ಟೆಂಪೊ ಚಾಲಕನೊರ್ವ ಅತೀ ವೇಗವಾಗಿ ಬಂದು ವಾಮನ ನಾಯ್ಕ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು.
ಡಿಕ್ಕಿ ರಭಸಕ್ಕೆ ಟೆಂಪೊ ವಾಮನ ನಾಯ್ಕ್ ಅವರನ್ನು ಸ್ವಲ್ಪ ದೂರ ಸ್ಕೂಟರ್ ಸಹಿತ ಎಳೆದುಕೊಂಡು ಹೋಗಿತ್ತು, ನಂತರ ಮುಂದಿದ್ದ ಕಾರಿಗೂ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ವಾಮನ್ ಅವರ ಎರಡು ಕಾಲುಗಳ ಮೇಲೆ ಟೆಂಪೋದ ಚಕ್ರ ಹರಿದು ಜಖಂಗೊಂಡಿತ್ತು.
ಇಂದು ಚಿಕಿತ್ಸೆ ಫಲಕಾರಿಯಾದೆ ವಾಮನ್ ನಾಯ್ಕ್ ಮೃತ ಪಟ್ಟಿದ್ದಾರೆ. ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ ಪ್ರಕಾಶ್ ಎಂಬಾತನ ಮೇಲೆ ಮಣಿಪಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮೃತರ ಪತ್ನಿ ಕೆಎಂಸಿ ಆಸ್ಪತ್ರೆಯ ಉದ್ಯೋಗಿಯಾಗಿದ್ದು, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ವಾಮನ ನಾಯ್ಕ್ ಅವರು ಹಣಕಾಸಿನ ವ್ಯವಹಾರ, ರಿಯಲ್ ಎಸ್ಟೆಟ್ ವ್ಯವಹಾರ ನಡೆಸುತ್ತಿದ್ದರು. ಅವರ ಆಪ್ತ ಈ ಅಪಘಾತದ ಬಗ್ಗೆ ಸಂಶಯ ವ್ಯಕ್ತಪಡಿ ಸುತ್ತಿದ್ದಾರೆ.