
ಉಡುಪಿ,ಡಿ.18; ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ, ಬಹಳ ಸಮಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊರ್ವರು ಗುಣಮುಖ ರಾಗಿದ್ದು, ಅವರು ಮನೆಗೆ ಸೇರಲು ಬಯಸಿದ್ದು. ಸಂಬಂಧಿಕರ ಬರುವಿಕೆಯ ನಿರೀಕ್ಷೆಯಲ್ಲಿ ಇದ್ದಾರೆ. ಅಶ್ವಥ್ ಪೂಜಾರಿ (28 ವ) ತಂದೆ ಭೋಜ ಪೂಜಾರಿ, ರಂಗನಪಲ್ಕೆ ಇಲ್ಲಿಯ ನಿವಾಸಿ ಎಂದು ಹೇಳಿಕೊಂಡಿದ್ದಾರೆ. ಸಂಬಂಧಿಕರು ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು, ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ವಿನಂತಿಸಿಕೊಂಡಿದ್ದಾರೆ.