ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಒಂದನೇ ಮೂಲ್ಯಣ್ಣ ಅನುವಂಶೀಯ ಅರ್ಚಕರಿಗೆ ಸ್ವರ್ಣ ಬಳೆ ಸಮರ್ಪಣೆ

ಮಂಗಳೂರು : ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಒಂದನೇ ಮೂಲ್ಯಣ್ಣ ಅನುವಂಶೀಯ ಅರ್ಚಕರಿಗೆ ಸ್ವರ್ಣ ಬಳೆ ಸಮರ್ಪಣೆಯು ಸಂಪ್ರದಾಯದಂತೆ ಪಣೋಲಿಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅನುವಂಶಿಕ ಪ್ರಧಾನ ಅರ್ಚಕರಾಗಿದ್ದ ದಿ. ಗುಡ್ಡ ಮೂಲ್ಯ ಯಾನೆ ಬಾಬು ಮೂಲ್ಯರ ಉತ್ತರಾಧಿಕಾರಿಯಾದ ದೈವಸ್ಥಾನದ ಸಂಪ್ರದಾಯದಂತೆ ಒಂದನೇ ಅರ್ಚಕ ಗುಡ್ಡ ಮೂಲ್ಯ ಯಾನೆ ವಾಸುದೇವ ಮೂಲ್ಯರಿಗೆ, ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಎರಡನೆ ಅರ್ಚಕರಾದ ಶ್ರೀ ನಾರಾಯಣ ಮೂಲ್ಯ, ಮೂರನೆ ಅರ್ಚಕ ಮೋನಪ್ಪ ಮೂಲ್ಯ, ಹಾಗೂ ಕುಟುಂಬದ ಹಿರಿಯ ಸದಸ್ಯರಾದ ಪೂವಪ್ಪ ಮೂಲ್ಯ ಕುಂಡಡ್ಕ, ಬೂಬ ಸಾಲ್ಯಾನ್ ಮತ್ತು ಕುಟುಂಬದ ಸದಸ್ಯರು ಹಾಗೂ ಭಂಡಾರದ ಮನೆಯ ನವೀನ್ ಕುಮಾರ್, ಉಮೇಶ್ ಕುಲಾಲ್ ಮಂಚಿ, ಮತ್ತು ಗ್ರಾಮಸ್ಥರು, ಭಕ್ತಾಧಿಗಳ ಸಮ್ಮುಖದಲ್ಲಿ ದೈವ ಕಲ್ಲುರ್ಟಿಯ ಮುಂಭಾಗದಲ್ಲಿ, ಕಟ್ಟು ಕಟ್ಟಳೆಯಂತೆ ದೈವದ ಪ್ರಧಾನ ಅರ್ಚಕರ ಸ್ವರ್ಣ ಬಳೆ ತೊಡಿಸಿ ದೈವ ಚಾಕರಿಗೆ ಜವಾಬ್ದಾರಿ ನೀಡಲಾಯಿತು.
ಕುಟುಂಬದ ಕಟ್ಟು ಪಾಡಿನ ಬಗ್ಗೆ ದೈವಸ್ಥಾನದ ಸಂಬಂಧಪಟ್ಟವರಿಗೆ ಹಾಗೂ ಕಾರ್ಯ ನಿರ್ವಹಣಾ ಅಧಿಕಾರಿಯವರಿಗೆ ಮೌಖಿಕವಾಗಿ ತಿಳಿಸಿ, ಸಂಪ್ರದಾಯದೊಂದಿಗೆ ನಡೆಸಲಾಯಿತು. ಈ ಸಂಧರಮೇಶ್ ಕುಲಾಲ್ ಪಣೋಲಿಬೈಲ್, ರಾಜು ಕುಲಾಲ್, ಲೋಹಿತ್ ಕುಮಾರ್ S, ಪಣೋಲಿಬೈಲ್, ಕುಕ್ಕುಟ ಸಮಿತಿಯ ಅಧ್ಯಕ್ಷ ದಯಾನಂದ ಅಡ್ಯಾರ್, ಯುವ ವೇದಿಕೆ ಪಣೋಲಿಬೈಲಿನ ರಮೇಶ್ ಎಂ, ಭಂಡಾರದ ಮನೆ, ಲಿಂಗಪ್ಪ ಬಂಗೇರ ಕಾರಜೆ, ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಕಾರ್ತಿಕ್ ಬಂಟ್ವಾಳ್, ಪುನೀತ್ ಕಾಮಾಜೆ, ಜಯರಾಮ ಶೆಟ್ಟಿ ನಗ್ರಿಗುತ್ತು, ನಾಗೇಶ್ ಬಂಗೇರ, ಮನೋಜ್ ಕುಮಾರ್, ಬಾಲಕ್ರಷ್ಣ ಕುಲಾಲ್, ಗೋಪಾಲ ಕುಲಾಲ್, ಹಾಗೂ ಹೆಚ್ಚಿನ ಭಕ್ತಾದಿಗಳು ಭಾಗವಹಿಸಿದ್ದರು.