ತಾಜಾ ಸುದ್ದಿಗಳುರಾಜ್ಯ

ಇಂದಿನಿಂದ ಬೆಂಗಳೂರಿನಲ್ಲಿ 5000 ಬಿಎಂಟಿಸಿ ಬಸ್ ಸಂಚಾರ!!

ಬೆಂಗಳೂರು: ಅನ್ ಲಾಕ್ -3 ಪ್ರಕ್ರಿಯೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ನಿತ್ಯ 5000 ಬಿಎಂಟಿಸಿ ಬಸ್ ಗಳು ಬೆಂಗಳೂರಿನಲ್ಲಿ ಸಂಚಾರ ನಡೆಸಲಿವೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಈ ಮಾಹಿತಿ ನೀಡಿದ್ದಾರೆ.

ಬಸ್ ಗಳಲ್ಲಿ ಕೇವಲ ಕುಳಿತು ಪ್ರಯಾಣ ಮಾಡಲು ಮಾತ್ರ ಅವಕಾಶ ನೀಡಲಾಗುವುದು. ನಿಂತು ಪ್ರಯಾಣಿಸಲು ಅವಕಾಶ ಇಲ್ಲ. ಈ ಸಂಬಂಧ ಚಾಲಕ ಮತ್ತು ನಿರ್ವಾಹಕರಿಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಸ್ ಗಳಲ್ಲಿ ಶೇಕಡ 100 ಆಸನ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!