ಕರಾವಳಿ

ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ- ವಾರ್ಷಿಕ ಮಹಾಸಭೆ; 10% ಡಿವಿಡೆಂಡ್ ಘೋಷಣೆ

ಉಡುಪಿ: ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ- ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಹೋಟೆಲ್ ಉಡುಪಿ ರೆಸಿಡೆನ್ಸಿಯಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಲಾಯಿತು.

ಸಂಘದ ಉಪಾಧ್ಯಕರಾದ ರಮೇಶ್ ಶೆಟ್ಟಿ ಕಾರ್ಕಳ, ರಮೇಶ್ ಶೆಟ್ಟಿ ಜಾರ್ಕಳ, ಗಣೇಶ್ ಕುಮಾರ್, ರಾಧಿಕಾ ಕಾಮತ್ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ರಂಜಿತಾ ಪ್ರವೀಣ್‌ರವರು 2020-21ರ ಆಡಳಿತ ವರದಿಯನ್ನು ಮಂಡಿಸಿದರು. ಸಂಘದ ನಿರ್ದೇಶಕರಾದ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ನಿರ್ದೇಶಕರಾದ ರಾಮಚಂದ್ರ ಸನಿಲ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!