ಕರಾವಳಿ

ಜಿಲ್ಲೆಯ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡಿನ ಪ್ರಯೋಜನ ಒದಗಿಸಿ: ಕೂರ್ಮಾರಾವ್

ಉಡುಪಿ ಜಿಲ್ಲೆಯ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್
ಕಾರ್ಡ್ ನ ಸದುಪಯೋಗದ ಬಗ್ಗೆ ಅರಿವು ಮೂಡಿಸಿ
ಈ ಕಾರ್ಡ್ ನಿಂದ ಪಡೆಯಬಹುದಾದ ಸೌಲಭ್ಯಗಳನ್ನು ಎಲ್ಲಾ ಅರ್ಹ ರೈತರಿಗೂ ಆದ್ಯತೆಯ ಮೇರೆಯಲ್ಲಿ ವಿತರಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ
“ಕಿಸಾನ್ ಭಾಗೀದಾರಿ-ಪ್ರಾಥಮಿಕತಾ ಹಮಾರಿ”
ವಿಶೇಷ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು
1,60,000.00 ರೂಗಳ ವರೆಗೆ ಯಾವುದೇ ಗ್ಯಾರಂಟಿ
ನೀಡದೇ ಬ್ಯಾಂಕ್ ಗಳಿಂದ ಸಾಲ ಪಡೆಯಬಹುದಾಗಿದ್ದು, ಇದರಿಂದ ಇತರೆ ವಾಣಿಜ್ಯ
ಬ್ಯಾಂಕ್ ಗಳು ಮತ್ತು ಲೇವಾದೇವಿಗಾರರಿಂದ ಹೆಚ್ಚಿನ
ಬಡ್ಡಿಗೆ ಸಾಲ ಪಡೆದು ತೊಂದರೆಗೀಡಾಗುವುದು
ತಪ್ಪುತ್ತದೆ. ರೈತರನ್ನು ಕಿಸಾನ್ ಕಾರ್ಡ್ ಯೋಜನೆಗೆ
ನೊಂದಣಿ ಮಾಡಲು ಏಪ್ರಿಲ್ 24 ರಿಂದ ಮೇ 1
ರವರೆಗೆ ನಡೆಯುವ ಬೃಹತ್ ಆಂದೋಲನದಲ್ಲಿ
ಜಿಲ್ಲೆಯ ಎಲ್ಲಾ ರೈತರನ್ನು ಈ ಯೋಜನೆಯಡಿ
ನೊಂದಣಿ ಮಾಡಿ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 1,63,439 ರೈತರು ಪ್ರೋಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿದ್ದು, 55164 ಮಂದಿ ಕಿಸಾನ್ ಕ್ರೆಡಿಟ್  ಕಾರ್ಡ್ ಗಳನ್ನು ಪಡೆದಿದ್ದಾರೆ. ಇನ್ನೂ 11,4033 ರೈತರು
ಕಾರ್ಡ್ ಪಡೆಯಲು ಬಾಕಿ ಇದ್ದು, ಈ ರೈತರಿಗೆ ಗ್ರಾಮ
ಪಂಚಾಯತ್ ಗಳಲ್ಲಿ ಬ್ಯಾಂಕ್ ಅಧಿಕಾರಿಗಳು
ಭಾಗವಹಿಸುವ ಗ್ರಾಮಸಭೆಗಳಲ್ಲಿ ಈ ಬಗ್ಗೆ ಮಾಹಿತಿ
ನೀಡಬೇಕು ಮತ್ತು ಬ್ಯಾಂಕ್ ಮಿತ್ರ, ಡಿಜಿ ಪೇ ಸಖಿಯರ ಮೂಲಕ ರೈತರ ಮನೆ ಮನೆಗಳಿಗೆ ಭೇಟಿ ನೀಡಿ, ಯೋಜನೆಯ ಬಗ್ಗೆ ಅರಿವು ಮೂಡಿಸಬೇಕೆಂದು ಅವರು ಸೂಚಿಸಿದರು.

ಈ ವಿಶೇಷ ಆಂದೋಲದನ ಅವಧಿಯಲ್ಲಿ,
ಬ್ಯಾಂಕ್‌ಗಳು ತಮ್ಮ ಶಾಖೆಗಳನ್ನು ವಾರದಲ್ಲಿ ಕನಿಷ್ಠ 2 ದಿನಗಳ ವಿಶೇಷ ಮೇಳಗಳನ್ನು ಆಯೋಜಸಿ,ರೈತರನ್ನು ನೋಂದಣಿ ಮಾಡಬೇಕು, ಕೃಷಿ ಪ್ರಾಥಮಿಕ ಸಹಕಾರ ಸಂಘಗಳು ಮತ್ತು ರೈತಸೇವಾ ಕೇಂದ್ರಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ಈ ಬಗ್ಗೆ ಅರಿವು
ಮೂಡಿಸಬೇಕು, ಪ್ರೋಟ್ ತಂತ್ರಾಂಶದಲ್ಲಿ
ನೋಂದಣಿಯಾಗಿರುವ ರೈತರಿಗೆ ಎಸ್.ಎಂ.ಎಸ್
ಸಂದೇಶಗಳನ್ನು ಕಳುಹಿಸುವಂತೆ ಕೃಷಿ ಇಲಾಖೆಯ
ಅಧಿಕಾರಿಗಳಿಗೆ ತಿಳಿಸಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ನೋಂದಣಿಗೆ ಬಾಕಿ ಇರುವ
ರೈತರ ಪಟ್ಟಿಯನ್ನು ಪರಿಶೀಲಿಸಿ, ಸಂಬಂಧಪಟ್ಟ
ತಾಲೂಕುಗಳ ವ್ಯಾಪ್ತಿಯಲ್ಲಿನ ಬ್ಯಾಂಕ್ ಗಳು, ರೈತರನ್ನು ಯೋಜನೆಗೆ ನೋಂದಣಿ ಮಾಡುವ ಕುರಿತಂತೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅದರಂತೆ ಕಾರ್ಯ ನಿರ್ವಹಿಸಿ, ನಿಗದಿತ ಅವಧಿಯೊಳಗೆ ನೋಂದಣಿಯನ್ನು ಮುಕ್ತಾಯಗೊಳಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್
ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್
ಗಳಲ್ಲಿ ಗ್ರಾಮಸಭೆಗಳು ನಡೆಯಲಿದ್ದು, ಸಮೀಪದ
ಬ್ಯಾಂಕ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ
ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನದ ಬಗ್ಗೆ ಮಾಹಿತಿ ನೀಡಲಾಗುವುದು, ಗ್ರಾಮ ಪಂಚಾಯತ್ ಪಿಡಿಓ ಗಳಿಗೆ ಸಹ ಈ ಬಗ್ಗೆ ಸೂಚನೆ ನೀಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ,‌‌ ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ, ಕೆನರಾ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ರ ಶ್ರೀಜಿತ್, ನಬಾರ್ಡ್ ನ ಪ್ರಾದೇಶಿಕ ಮ್ಯಾನೇಜರ್  ಸಂಗೀತಾ ಕಾರ್ಥಾ, ಯೂನಿಯನ್ ಬ್ಯಾಂಕ್ ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪಕರ್ನಾಟಕ‌‌ ಪ್ರಾದೇಶಿಕ ಮ್ಯಾನೇಜರ್ ರಾಜ್ ಗೋಪಾಲ್ ಹಾಗೂ‌‌ ಜಿಲ್ಲೆಯ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!