ರಾಷ್ಟ್ರೀಯ
ಐದು ಕೋಟಿ ಮೌಲ್ಯದ ಹಾರ್ದಿಕ್ ಪಾಂಡ್ಯಾರ ವಾಚ್ ಕಸ್ಟಮ್ಸ್ ಬಲೆಗೆ !

ಮುಂಬೈ: ದುಬೈ ಟಿ20 ವಿಶ್ವಕಪ್ ಸರಣಿ ಬಳಿಕ ಭಾರಕ್ಕೆ ಹಿಂದಿರುಗುತ್ತಿದ್ದ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ 5 ಕೋಟಿ ಮೌಲ್ಯದ ಎರಡು ವಾಚ್ಗಳನ್ನು ಕಸ್ಟಮ್ಸ್ ಇಲಾಖೆಯು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ.
ಹಾರ್ದಿಕ್ ಪಾಂಡ್ಯ ಬಳಿ ದುಬಾರಿ ವಾಚ್ ಗಳ ಇನ್ ವಾಯ್ಸ್ ಇರಲಿಲ್ಲ ಎನ್ನಲಾಗಿದ್ದು, ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ನಿರಾಶಾದಾಯಕ ಫಲಿತಾಂಶದ ನಂತರ ಭಾರತೀಯ ಆಟಗಾರರು ತವರಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ವೇಳೆ ಹಾರ್ದಿಕ್ ಪಾಂಡ್ಯ ಅವರನ್ನು ಕಸ್ಟಮ್ಸ್ ಇಲಾಖೆ ತಡೆದು 5 ಕೋಟಿ ರೂಪಾಯಿ ಮೌಲ್ಯದ ಎರಡು ವಾಚ್ಗಳನ್ನು ವಶಕ್ಕೆ ಪಡೆದಿದೆ.