ಲೋಹದ ಪೆಟ್ಟಿಗೆಗಳಲ್ಲಿ ಕೋವಿಡ್ ರೋಗಿಗಳು!

ಚೀನಾ: ಚೀನಾದಲ್ಲಿ ಶಂಕಿತ ಕೊವಿಡ್-19 ರೋಗಿಗಳನ್ನು ಇರಿಸಲು ಲೋಹದ ಪೆಟ್ಟಿಗೆಗಳು, ಜನರನ್ನು ಕ್ವಾರಂಟೈನ್ ಶಿಬಿರಗಳಿಗೆ ಕರೆದೊಯ್ಯುವ ಬಸ್‌ಗಳ ಸಾಲುಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಡಿಸ್ಟೋಪಿಯನ್ ಚಲನಚಿತ್ರದಲ್ಲಿ ಕಾಣುವಂತ ಈ ದೃಶ್ಯಗಳು ಕೊವಿಡ್-19 ಹರಡುವಿಕೆಯನ್ನು ಪರಿಶೀಲಿಸಲು ದೇಶವು ತೆಗೆದುಕೊಳ್ಳುತ್ತಿರುವ ಹಲವಾರು ಕಟ್ಟುನಿಟ್ಟಾದ ತಡೆಗಟ್ಟುವ ನಿಯಮಗಳಲ್ಲಿ ಇದು ಒಂದಾಗಿದೆ. ಚೀನಾ ತನ್ನ ‘ಶೂನ್ಯ ಕೊವಿಡ್’ ನೀತಿಯ ಅಡಿಯಲ್ಲಿ ತನ್ನ ನಾಗರಿಕರ ಮೇಲೆ ಹಲವಾರು ಕಠಿಣ ನಿಯಮಗಳನ್ನು ವಿಧಿಸಿದೆ.
ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಜನರು ಮರದ ಹಾಸಿಗೆ ಮತ್ತು ಶೌಚಾಲಯದಿಂದ ಸುಸಜ್ಜಿತವಾದ ಈ ಕಿಕ್ಕಿರಿದ ಪೆಟ್ಟಿಗೆಗಳಲ್ಲಿ – ಎರಡು ವಾರಗಳವರೆಗೆ ಉಳಿಯಲು ಒತ್ತಾಯಿಸಲಾಗುತ್ತಿದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.
Millions of chinese people are living in covid quarantine camps now!
2022/1/9 pic.twitter.com/wO1cekQhps— Songpinganq (@songpinganq) January 9, 2022