ಕಟಪಾಡಿ :ತೆಂಗಿನ ಮರ ಹತ್ತುವವರಿಗೆ ಕೇರ ಸುರಕ್ಷಾ ವಿಮೆ ನೊಂದಾವಣೆ

ಭಾರತ ಸರಕಾರದ ತೆಂಗಿನ ಮರ ಹತ್ತುವ ಕಾರ್ಮಿಕರ ಭದ್ರತೆಗಾಗಿ ಇರುವ ಕೇರಾ ವಿಮೆ ನೋಂದಾವಣೆ ಕಟಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು .
ಕಟಪಾಡಿ ಸುತ್ತಲಿನ ಗ್ರಾಮದ 42 ಕಾರ್ಮಿಕರಿಗೆ ವಿಮಾಯೋಜನೆ ನೊಂದಾವಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಪಡುಬಿದ್ರಿ ಮೂರ್ತೆದಾರರ ಸಂಘದ ಅಧ್ಯಕ್ಷರಾದ ಶ್ರೀ ಪಿ ಕೆ ಸದಾನಂದರು ಹಲವಾರು ವರ್ಷಗಳಿಂದ ಮೂರ್ತೆದಾರರ ಅನುಭವಿಸಿಕೊಂಡು ಬಂದಿರುವ ಕಷ್ಟ ನೋವುಗಳ ಬಗ್ಗೆ ವಿವರಿಸಿದರು . ತೆಂಗಿನ ಮರ ಹತ್ತುವವರ ಸಂಘಟನೆಯ ಸಂಚಾಲಕರಾದ ಪ್ರಾಣೇಶ ಹೆಜಮಾಡಿ ಮಾತನಾಡುತ್ತಾ ತೆಂಗಿನ ಮರ ಹತ್ತುವ ಕಾರ್ಮಿಕರ ಸಂಘಟನೆಯ ಅವಶ್ಯಕತೆ ಬಗ್ಗೆ ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ ಸರಿಸುಮಾರು 4ಸಾವಿರಕ್ಕಿಂತಲೂ ಮಿಕ್ಕಿ ಕಾರ್ಮಿಕರು ಇರಬಹುದು ಅದರಲ್ಲಿ ಗರಿಷ್ಠ 250 ಮಾತ್ರ ನೋಂದಾವಣಿ ಆಗಿರಬಹುದು. ಇನ್ನೂ ಹೆಚ್ಚಿನ ಮಂದಿ ನೋಂದಾವಣೆಯಾಗಲು ಬಾಕಿ ಇರುವ ಸಂದರ್ಭದಲ್ಲಿ ವಿಮಾ ನೋಂದಾವಣೆಯನ್ನು ಮುಂದಿನ ದಿನಗಳಲ್ಲಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು.
ತೆಂಗು ಅಭಿವೃದ್ಧಿ ಮಂಡಳಿಯ ನಿರ್ದೇಶಕರು ಸಚಿವರಾದ ಶೋಭಾ ಕರಂದ್ಲಾಜೆ ಅವರ ಗಮನಕ್ಕೆ ತರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು . ಕಾಪು ತಾಲೂಕಿನ ಸಹಾಯಕ ತೋಟಗಾರಿಕಾ ಅಧಿಕಾರಿ ನೋಂದಾವಣೆ ಮಾಡಿದರು ಸಾಮಾಜಿಕ ಕಾರ್ಯಕರ್ತ ಶ್ರೀ ಸಂತೋಷ್ ಕಟಪಾಡಿ ಕಾರ್ಯಕ್ರಮ ಸಂಘಟಿಸಿದರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಪೂರ್ತಿ ಸಹಕಾರವಿತ್ತರು .