ಕಾರ್ಕಳ: ಐಟಿಐ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ!

ಉಡುಪಿ : ಅಟೋಮೊಬೈಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವನು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಹಿರಿಯಡ್ಕ ಮೈಟೆಕ್ ಐ.ಟಿ.ಐ ನಲ್ಲಿ ಈತ ಕಲಿಯುತಿದ್ದನು. ನೀರೆ ಗ್ರಾಮದ ನಿವಾಸಿ ಸದಾಶಿವ ಅವರ ಮಗ ಅನೀಶ್ (19) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ತನ್ನ ಪೋಷಕರು ಇಲ್ಲದಿದ್ದಾಗ ಅನೀಶ್ ಈ ರೀತಿಯ ತೀವ್ರ ಹೆಜ್ಜೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅನೀಶ್ ಜೊತೆ ಪರೀಕ್ಷೆಗೆ ಹೋಗಲು ಸಂಬಂಧಿಯಾದ ನೆರೆಮನೆಯ ಆಶಿಶ್ ಬೆಳಿಗ್ಗೆ 10:00 ಗಂಟೆಗೆ ಮತ್ತು 11:00 ಗಂಟೆಗೆ ಫೋನ್ ಮಾಡಿದರೂ ಕೂಡ ಈತ ಫೋನ್ ತೆಗೆಯದ ಕಾರಣ ಕೂಡಲೇ ಮನೆಗೆ ಹೋಗಿ ಬೆಡ್‌ರೂಮಿನ ಬಾಗಿಲು ಬಡಿದರೂ ಬಾಗಿಲು ತೆರೆಯದ ಕಾರಣ ಕಿಟಿಕಿಯಿಂದ ನೋಡಿದಾಗ ಫ್ಯಾನ್‌ಹುಕ್‌ಗೆ ಶಾಲಿನಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಬೆಡ್‌ರೂಮಿನ ಬಾಗಿಲು ಒಡೆದು ಅನೀಶ್‌ನನ್ನು ಬೈಲೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಆತನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅನೀಶ್‌ನು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.