ಕರಾವಳಿ

ಉಡುಪಿ ಕೋಟದಲ್ಲಿ 30 ಗಜಗಳ ರಾಷ್ಟ್ರೀಯ ಮಟ್ಟದ ‘ಪಾಂಚಜನ್ಯ ಟ್ರೋಫಿ- 2022

ಕುಂದಾಪುರ: ಪಾಂಚಜನ್ಯ ಈವೆಂಟ್ಸ್ ಪ್ರಾಯೋಜಕತ್ವದಲ್ಲಿ, ಚತುರ ಸಂಘಟಕ ನಿತೇಶ್ ಶೆಟ್ಟಿ ಸಾರಥ್ಯದಲ್ಲಿ, 30 ಗಜಗಳ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಾಂಚಜನ್ಯ ಟ್ರೋಫಿ- 2022 ಆಯೋಜಿಸಲಾಗಿದೆ.

ಮಾರ್ಚ್ 25,26 ಮತ್ತು 27 ರಂದು ಕೋಟ ಗಿಳಿಯಾರು ಶಾಂಭವಿ ಶಾಲಾ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು, ಉತ್ತರ ಪ್ರದೇಶದ ತಂಡ ಸೇರಿದಂತೆ ರಾಜ್ಯದ ಪ್ರತಿಷ್ಠಿತ 20 ತಂಡಗಳು ಭಾಗವಹಿಸಲಿದೆ.

ಪ್ರಥಮ ಪ್ರಶಸ್ತಿ 1.5 ಲಕ್ಷ ನಗದು, ದ್ವಿತೀಯ ಪ್ರಶಸ್ತಿ 1 ಲಕ್ಷ ನಗದು, ತೃತೀಯ ಪ್ರಶಸ್ತಿ 25 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.

30 ಗಜಗಳ ಮಾದರಿಯಲ್ಲಿ ಪಂದ್ಯಾವಳಿಯಲ್ಲಿ ಅಳವಡಿಸಲಾದ ವಿನೂತನ 5 ನಿಯಮಗಳು:

ರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ 5 ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಪಂದ್ಯವು 8 ಓವರ್ ಗಳಲ್ಲಿ ಸಾಗಲಿದ್ದು, ಬ್ಯಾಟಿಂಗ್ ಪವರ್ ಪ್ಲೇ, ಬೌಲಿಂಗ್ ಪವರ್ ಪ್ಲೇ, ಎಕ್ಸ್-ಫ್ಯಾಕ್ಟರ್ ಪ್ಲೇ, ಬೂಸ್ಟ್ ಪಾಯಿಂಟ್, ಕ್ವಿಕ್ ಲೀಗ್ ಮಾದರಿಯನ್ನು ಅಳವಡಿಸಲಾಗಿದೆ.

ಪಂದ್ಯಾಟದ ವಿಶೇಷ ಆಕರ್ಷಣೆ ಎಂಬಂತೆ, 90 ರ ದಶಕದ ರಾಜ್ಯದ ಪ್ರಸಿಧ್ಧ 2 ತಂಡಗಳಾದ ಚಕ್ರವರ್ತಿ ಕುಂದಾಪುರ ಮತ್ತು ಇಲೆವೆನ್ ಅಪ್ ಕೋಟ ತಂಡಗಳ ನಡುವೆ, ಮಾ.26 ರಂದು ರಾತ್ರಿ 7 ಗಂಟೆಗೆ ಪ್ರದರ್ಶನ ಪಂದ್ಯ ಆಯೋಜಿಸಲಾಗಿದ್ದು, ಕ್ರೀಡಾ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

ಪಂದ್ಯಾಟದಲ್ಲಿ ಭಾಗವಹಿಸುವ 20 ತಂಡಗಳ ವಿವರ ಈ ಕೆಳಗಿನಂತಿದೆ.

1) ಶೆಟ್ಟಿ ಎಂಪೈರ್ ತೊಂಬತ್ತು

2) ನಿಝಾಮ್ ವಾರಿಯರ್ಸ್

3) ಕಟ್ಟೆ ಫ್ರೆಂಡ್ಸ್ ಕಾಳಾವರ

4) ರಿಯಲ್ ಫೈಟರ್ಸ್ ಅಜಯ್ ಕುಂಜಿಗುಡಿ

5) 8 ಸ್ಟಾರ್ ಉಪ್ಪುಂದ

6) ಜೈ ಕರ್ನಾಟಕ ಬೆಂಗಳೂರು

7) ಅನುವಂಶಿ- ಮಾರಿಕಾಂಬಾ

8) ಪವರ್ ಆಫ್ ಯೂತ್ ತುಮಕೂರು

9) ಪ್ರಕೃತಿ ಎನ್.ಎಫ್.ಹೆಚ್ ಫ್ರೆಂಡ್ಸ್ ಬನ್ನಾಡಿ

10) ಹ್ಯಾಪಿ ಕ್ರಿಕೆಟರ್ಸ್ ಕೋಟೇಶ್ವರ

11) ಜಾನ್ಸನ್ ಕುಂದಾಪುರ

12) ಬಿ.ಜಿ.ಕ್ರಿಕೆಟರ್ಸ್ ಉಡುಪಿ

13) ಜಾಲಿ ಜೈ ಭಾರತ್

14) ಕೀಳೇಶ್ವರಿ ವಿಠಲವಾಡಿ

15) ಫ್ರೆಂಡ್ಸ್ ಗಿಳಿಯಾರು

16) ಚಾಲೆಂಜ್ ಕುಂದಾಪುರ

17) ಇನ್ನಿಂಗ್ಸ್ ಸ್ಟಾರ್ಸ್ ಕ್ರಿಕೆಟ್ ಕ್ಲಬ್

18) ಸೋನೆಭದ್ರ ಇಲೆವೆನ್-ಉತ್ತರ ಪ್ರದೇಶ

19) ಎಸ್.ಇ.ಸಿ.ಸಿ ಗೋಳಿಯಂಗಡಿ

20) ಗುರು ಕ್ರಿಕೆಟರ್ಸ್ ಬೆಂಗಳೂರು

ಪಂದ್ಯಾಟದ ನೇರ ಪ್ರಸಾರ ಕ್ರಿಕ್ ಸೇ ಯೂಟ್ಯೂಬ್ ಚಾನೆಲ್ ನಲ್ಲಿ ವಿಸ್ತಾರಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!