ಕರಾವಳಿ
ಉಡುಪಿ : 3 ನೇ ತರಗತಿಯ ವಿದ್ಯಾರ್ಥಿ ಕೈಕಾಲು ತೊಳೆಯಲು ಕೆಳಗೆ ಇಳಿದ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಮೃತ್ಯು

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಶನಿವಾರ ಸಂಜೆ ಮನೆಯಿಂದ ಆಟವಾಡಲು ಹೋಗಿದ್ದ ಮೂರನೇ ತರಗತಿಯ ವಿದ್ಯಾರ್ಥಿಯೋರ್ವ ಭಜನಾ ಮಂದಿರದ ಕೆರೆಗೆ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ.
ಕಡೆಕಾರ್ ನಿವಾಸಿ ಗಿರೀಶ್ ಭಟ್ ಎಂಬವರ ಮಗ ರಾಘವೇಂದ್ರ ಸಾವನ್ನಪ್ಪಿದ ಬಾಲಕ ಎಂದು ತಿಳಿದು ಬಂದಿದೆ.
ನಿನ್ನೆ ಮನೆ ಬಳಿ ಆಟವಾಡಲು ಜಾರುಬಂಡಿಗೆ ಹೋಗಿದ್ದ ಬಾಲಕ ಕೈಕಾಲು ತೊಳೆಯಲು ಕೆರೆಗೆ ಇಳಿದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದು, ಈಜಾಡಲು ಬರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ
ನಿನ್ನೆ ರಾತ್ರಿ ಇಡಿ ಹುಡುಕಾಟ ನಡೆಸಿದರು ಬಾಲಕ ಪತ್ತೆಯಾಗದ ಕಾರಣ ಇಂದು ಬೆಳಿಗ್ಗೆ ಮುಳುಗು ತಜ್ಞ ಈಶ್ವರ್ ಮಲ್ಪೆಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.ನೀರಿನಾಳದಲ್ಲಿ ಬಾಲಕನ ಮೃತ ದೇಹ ಪತ್ತೆ ಹಚ್ಚಿ ಮೇಲೆತ್ತಿದ್ದಾರೆ .ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.