ಕರಾವಳಿ
ಮಂಗಳೂರಿನಿಂದ ಉಡುಪಿಗೆ ಆತ್ಮಹತ್ಯೆಗೆಂದು ತೆರಳಿ ವಸತಿಗೃಹ ಹುಡುಕುತ್ತಿದ್ದವನ ರಕ್ಷಣೆ

ಉಡುಪಿ: ಮಂಗಳೂರು ಮೂಲದ ವ್ಯಕ್ತಿ ಉಡುಪಿಗೆ
ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವನನ್ನು ಸಮಾಜಸೇವಕರ ತಂಡವೊಂದು ತಡೆದು ರಕ್ಷಿಸಿದೆ.
ಮಂಗಳೂರು ಮೂಲದ ಹೋಟೆಲಿನಲ್ಲಿ ಬಾಣಸಿಗರಾಗಿದ್ದ ವ್ಯಕ್ತಿ ಮನನೊಂದು ಆತ್ಮಹತ್ಯೆ
ಮಾಡಿಕೊಳ್ಳಲು ಉಡುಪಿಯ ಖಾಸಗಿ ವಸತಿಗ್ರಹ
ಹುಡುಕುತ್ತಿದ್ದರು. ವಿಷಯ ತಿಳಿದು ಉಡುಪಿಯ ಸಮಾಜಸೇವಕರು ವ್ಯಕ್ತಿಯನ್ನು ರಕ್ಷಿಸಿ ಮನವೊಲಿಸಿ ಸಂಬಂಧಿಕರ ಜೊತೆ ಕಳುಹಿಸಿಕೊಟ್ಟಿದ್ದಾರೆ.
ಸಮಾಜಸೇವಕರಾದ ನಿತ್ಯಾನಂದ ಒಳಕಾಡು , ಕೃಷ್ಣಮೂರ್ತಿ ಆಚಾರ್ಯ, ದೀಪಕ್ ಹರೀಶ ಅಮೀನ್ ಭಾಗಿಯಾಗಿದ್ದರು .