ಗರ್ಭಿಣಿಯರು ಲಸಿಕೆ ಪಡೆಯಲು ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಗರ್ಭಿಣಿಯರು ಸಹ ಕೊರೊನಾ ಲಸಿಕೆ ಪಡೆದುಕೊಳ್ಳಬಹುದು ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಗರ್ಭಿಣಿಯರು ಲಸಿಕೆ ಪಡೆಯಲು ಕೆಲವೊಂದು ಮಾರ್ಗಸೂಚಿಗಳನ್ನು ಇಲಾಖೆ ಬಿಡುಗಡೆ ಮಾಡಿದೆ.
ಲಸಿಕೆಗಾಗಿ ಕೋವಿಡ್ ಪೋರ್ಟಲ್ನಲ್ಲಿ ರಿಜಿಸ್ಟ್ರೇಷನ್ ಕಡ್ಡಾಯ ಮಾಡಲಾಗಿದೆ. ಆನಂತರ ಕೋವಿಡ್ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಸರ್ಕಾರ ಹೇಳಿದೆ. ಕೋವಿಡ್ ವೈರಸಸ್ನಿಂದ ಗರ್ಭಿಣಿಯರನ್ನ ಲಸಿಕೆ ರಕ್ಷಿಸುತ್ತದೆ ಅಂತ ಆರೋಗ್ಯ ಸಚಿವಾಲಯ ಹೇಳಿದೆ.
ಈಗ ಲಭ್ಯವಿರುವ ಕೋವಿಡ್ ಲಸಿಕೆಗಳು ಸುರಕ್ಷಿತವಾಗಿವೆ. ವ್ಯಾಕ್ಸಿನೇಷನ್ ಗರ್ಭಿಣಿಯರನ್ನು ಕೊರೊನಾದಿಂದ ಹಾಗೂ ಇತರ ರೋಗಗಳಿಂದ ರಕ್ಷಿಸುತ್ತದೆ.
ಹೆಚ್ಚಿನ ಗರ್ಭಿಣಿಯರು ರೋಗಲಕ್ಷಣರಹಿತರಾಗಿರುತ್ತಾರೆ. ಅಥವಾ ಕಡಿಮೆ ರೋಗಲಕ್ಷಣವನ್ನು ಹೊಂದಿರುತ್ತಾರೆ. ಆದರೆ ಅವರ ಆರೋಗ್ಯ ಶೀಘ್ರವಾಗಿ ಹದಗೆಡಬಹುದು ಮತ್ತು ಅದು ಭ್ರೂಣದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಒಂದು ವೇಳೆ ಗರ್ಭಿಣಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿದ್ದರೆ, ಹೆರಿಗೆಯ ನಂತರ ಆಕೆಗೆ ಲಸಿಕೆ ನೀಡಬೇಕು. ಲಸಿಕೆ ಚುಚ್ಚುಮದ್ದನ್ನು ಪಡೆದ ನಂತರ, ಸಣ್ಣ ಜ್ವರ, ಇಂಜೆಕ್ಷನ್ ಪಡೆದ ಸ್ಥಳದಲ್ಲಿ ನೋವು ಅಥವಾ 1-3 ದಿನಗಳವರೆಗೆ ಅನಾರೋಗ್ಯ ಇರಬಹುದು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.