ಸ್ವಾತಂತ್ರ್ಯದ ಅಮೃತ ಮಹೋತ್ಸವ” ಪ್ರಯುಕ್ತ ಆಗಸ್ಟ್ 13ರಿಂದ ಆಗಸ್ಟ್ 15ರ ವರೆಗೆ “ಹರ್ ಘರ್ ತಿರಂಗಾ” ಅಭಿಯಾನ

ಆಗಸ್ಟ್ 15, 2022ರಂದು ದೇಶವು ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಲಿದೆ. “ಸ್ವಾತಂತ್ರ್ಯದ ಅಮೃತ ಮಹೋತ್ಸವ”ದ ಸಂಭ್ರಮದ ಪ್ರಯುಕ್ತ “ಹರ್ ಘರ್ ತಿರಂಗಾ” (ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ) ಅಭಿಯಾನದ ಮೂಲಕ ಆಗಸ್ಟ್ 13ರಿಂದ ಆಗಸ್ಟ್ 15ರ ವರೆಗೆ ದೇಶಾದ್ಯಂತ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.
ಆ ಪ್ರಯುಕ್ತ S.V.S Highschool-college friends 1997-2002 ರ batch ನ ಹಳೆವಿದ್ಯಾರ್ಥಿ ಗಳ ವತಿಯಿಂದ S. V. S ಹೈಸ್ಕೂಲ್ ನ ಎಲ್ಲಾ ಮಕ್ಕಳಿಗೆ ಉಚಿತವಾಗಿ ತ್ರಿವರ್ಣ ಧ್ವಜ ವನ್ನು ಎಸ್. ವಿ. ಎಸ್ ಹೈಸ್ಕೂಲ್ ಕಟಪಾಡಿ ಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ತಂತ್ರಿ ಪ್ರಾಧ್ಯಾಪಕ ರಾದ ವಿಜಯ ಟೀಚರ್ ವಿವೇಕಾನಂದ ಸರ್ ಹಾಗೂ svs high school-college friends 1997-2002 ರ batch ನ ಗೌರವಾದ್ಯಕ್ಷರು,ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.