ಕರಾವಳಿ
ಯಶ್ ಪಾಲ್ ಸುವರ್ಣರವರ ತಂದೆ ವಿಧಿವಶ

ಉಡುಪಿ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ
ರವರ ತಂದೆ ಆನಂದ ಎನ್. ಪುತ್ರನ್ ರವರು ಶುಕ್ರವಾರ ಬೆಳಿಗ್ಗೆ ಅಜ್ಜರಕಾಡಿನ ತಮ್ಮ ನಿವಾಸದಲ್ಲಿ ನಿಧನ ರಾಗಿದ್ದಾರೆ.
ಮೃತರು ಪುತ್ರರಾದ ಯಶ್ಪಾಲ್ ಎ. ಸುವರ್ಣ, ಯಶವಂತ್
ಎ. ಸುವರ್ಣ, ಪುತ್ರಿಯರಾದ ಯಶ್ವಿನಿ ಪ್ರಮೋದ್ ಕುಮಾರ್, ಯಶ್ವಿಲ್ ಪ್ರಸೂನ್ ಕುಮಾರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಉಡುಪಿ ಬೀಡಿನ ಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಸಂಜೆ ಗಂಟೆ 5ಕ್ಕೆ ನಡೆಯಲಿದೆ.