ಕರಾವಳಿ
ಮಂಗಳೂರು : ಮನೆ ಅಂಗಳದಲ್ಲಿ ಅಸ್ಥಿಪಂಜರ ಪತ್ತೆ ; ಪೋಲಿಸರಿಂದ ಸ್ಥಳ ಪರಿಶೀಲನೆ

ಮಂಗಳೂರು: ಜನವಾಸವಿಲ್ಲದ ಮನೆಯ ಅಂಗಳದಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಣ್ಣಗುಡ್ಡೆಯ ಹೋಟೆಲ್ ದುರ್ಗಮಹಲ್ ಮುಂಭಾಗದ ರಸ್ತೆ ಸಮೀಪದ ಜನವಾಸವಿಲ್ಲದ ಮನೆಯ ಅಂಗಳದಲ್ಲಿ ಅಸ್ಥಿಪಂಜರ
ಪತ್ತೆಯಾಗಿರುವುದಾಗಿ ಸ್ಥಳೀಯರು ಪೊಲೀಸರಿಗೆ
ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಬರ್ಕೆ ಠಾಣಾ ಪೋಲಿಸರು
ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.