
ಜೆಸಿಐ ಉಪ್ಪುಂದಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ,ಸ್ಪೆಷೆಲ್ ಪ್ರೊಜೆಕ್ಟ್ ವಿನ್ನರ್,ರೈತ ಸ್ನೇಹಿ ಪುರಸ್ಕಾರ ಹೀಗೆ ಹತ್ತು ಹಲವಾರು ಪ್ರಶಸ್ತಿ ಲಭಿಸಿದ್ದು ಜೆಸಿಐ ಮಂಗಳೂರು ಶ್ರೇಷ್ಠ ಘಟಕದ ಅತಿಥ್ಯದಲ್ಲಿ ಮಂಗಳೂರು ಕುಲಶೇಖರ ಕಾರ್ಡಿಯಲ್ ಹಾಲಿನಲ್ಲಿ ನೆಡೆದ ವಲಯ 15 ರ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷೆ ಸೌಜನ್ಯಾ ಹೆಗ್ಡೆ ಪ್ರಶಸ್ತಿ ಪ್ರಧಾನಿಸಿದರು.
ನಿಕಟಪೂರ್ವ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ದೇವರಾಯ ದೇವಾಡಿಗ,ಜೇಸಿ ಘಟಕದ ಅಧ್ಯಕ್ಷ ಪುರುಷೋತ್ತಮದಾಸ್,ಘಟಕದ ಪೂರ್ವಾಧ್ಯಕ್ಷರಾದ ಯು.ಪ್ರಕಾಶ್ ಭಟ್,ಸುಬ್ರಹ್ಮಣ್ಯ ಜಿ,ಉದಯ್ ಡಿ.ಆರ್,ಪುರಂದರ್ ಖಾರ್ವಿ,ಕಾರ್ಯದರ್ಶಿ ಸಂದೀಪ್ ನಾಯಕ್,ಶ್ರೀ ಗಣೇಶ್ ಗಾಣಿಗ,ಮಂಜುನಾಥ್ ದೇವಾಡಿಗ,ಪ್ರದೀಪ್ ಶೆಟ್ಟಿ ಕಾರಿಕಟ್ಟೆ,ರಾಮಕೃಷ್ಣ ಖಾರ್ವಿ,ನಾಗರಾಜ್ ಉಬ್ಜೇರಿ ಮೊದಲಾದವರು ಉಪಸ್ಥಿತರಿದ್ದರು.