
ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದೆ . ಜನರನ್ನು ರಕ್ಷಣೆ ಮಾಡುತಿದ್ದ ಪೊಲೀಸರಿಗೂ ಕೊರೊನಾ ಪಾಸಿಟಿವ್ ಬರುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಏಳು ಪೊಲೀಸ್ ಠಾಣೆಯ ಪೊಲೀಸ್ ಪೇದೆಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಮತ್ತಷ್ಟು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ ನಗರದ ಬಂಡೇಪಾಳ್ಯ ಪೊಲೀಸ್ ಠಾಣೆ, ಜೆಜೆ ನಗರ ಪೊಲೀಸ್ ಠಾಣೆ, ಜೆಬಿ ನಗರ ಪೊಲೀಸ್ ಠಾಣೆ, ಡಿಜಿ ಅಂಡ್ ಐಜಿಪಿ ಕಚೇರಿ, ಫ್ರೇಜರ್ ಟೌನ್ ಪೊಲೀಸ್ ಠಾಣೆ, ಚಾಮರಾಜ ಪೇಟೆ ಸಿಎಆರ್ ಪೊಲೀಸ್ ಪೇದೆಗಳಿಗೆ ಪಾಸಿಟಿವ್ ಬಂದಿದೆ.ನಿನ್ನೆ ಹೆಣ್ಣೂರು ಪೊಲೀಸ್ ಠಾಣೆಯ ಕೋರ್ಟ್ ಬೀಟ್ ಪೊಲೀಸ್, ಶಂಕರ್ ಪುರಂ ಪೊಲೀಸ್ ಪೇದೆಗೂ ಕೊರೊನಾ ಪಾಸಿಟಿವ್ ಬಂದಿರುವುದು ಪೊಲೀಸರಲ್ಲಿ ಆತಂಕ ಶುರುವಾಗುವಂತೆ ಮಾಡಿದೆ.